ಬಿಬಿಎಂಪಿಗೆ ಮಾದರಿಯಾದ ಶಾಂತಿಪುರ ಗ್ರಾ.ಪಂ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಜೂ.26- ಬಿಬಿಎಂಪಿಗೆ ಕಸ ವಿಲೇವಾರಿ ಮಾಡುವುದೇ ತಲೆ ನೋವಾಗಿ ಪರಿಣಮಿಸಿದೆ. ಆದರೆ ರಾಜಧಾನಿಗೆ ಹೊಂದಿಕೊಂಡಿರುವ ಆನೇಕಲ್ ತಾಲ್ಲೂಕಿನ ಶಾಂತಿಪುರ ಗ್ರಾಮ ಪಂಚಾಯ್ತಿ ತ್ಯಾಜ್ಯದಿಂದಲೇ ಆದಾಯ ಗಳಿಸಲು ಮುಂದಾಗಿದೆ. ಮನೆ ಮನೆಗಳಿಂದಲೇ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಮೂಲಕ ಶಾಂತಿಪುರ ಗ್ರಾಮ ಪಂಚಾಯ್ತಿ ಇತರ ಪಂಚಾಯ್ತಿಗಳಿಗೆ ಮಾದರಿಯಾಗಿದೆ.

ಮಿಶ್ರಣವಾದ ಕಸವನ್ನು ಟ್ರಾಕ್ಟರ್ ಮೂಲಕ ಸಾಗಿಸಿ ಘನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕೂಲಿ ಕಾರ್ಮಿಕರ ಮೂಲಕ ಪ್ಲಾಸ್ಟಿಕ್, ಬಾಟಲ್, ಪೇಪರ್ ಇನ್ನಿತರ ಒಣಕಸ ಮತ್ತು ಹಸಿಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತಿದೆ. ಸಂಗ್ರಹವಾದ ಪ್ಲಾಸ್ಟಿಕ್, ಬಾಟಲ್, ಪೇಪರ್ ಇನ್ನಿತರ ವಸ್ತುಗಳನ್ನು ಹರಾಜು ಹಾಕಲಾಗುತ್ತದೆ, ಹಸಿ ಕಸವನ್ನು ಕಾಂಫೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಗೊಬ್ಬರವನ್ನು ಗಿಡಗಳಿಗೆ ಮತ್ತು ರೈತರಿಗೆ ನೀಡಲಾಗುತ್ತಿದೆ.

ಶಾಂತಿಪುರ ಗ್ರಾಮದಲ್ಲಿಯೇ ಪ್ರತಿ ದಿನ 2 ರಿಂದ 3 ಟನ್ ಕಸ ಸಂಗ್ರಹಣೆಯಾಗುತ್ತಿದ್ದು , ಕಸ ವಿಲೇವಾರಿ ಹೊಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆಗೆ ನೀಡಲಾಗಿದೆ. ಈ ಘನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡುವುದಕ್ಕೆ ಸುಮಾರು 15 ಲಕ್ಷ ವೆಚ್ಚವಾಗಿದೆ ಜೊತೆಗೆ ಸುಮಾರು 50 ಅಡಿ ಉದ್ದ 30 ಅಡಿ ಅಗಲ ಜಾಗವಿದ್ದು, ಒಂದು ಟ್ರಾಕ್ಟರ್ ಒಂದು ಟಾಟಾ ಎಸಿ ವಾಹನ ಮತ್ತು ಸುಮಾರು 8 ಜನ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗೆ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿ ಪಂಚಾಯ್ತಿಯಿಂದ ಗ್ರಾಮದ ಎಲ್ಲಾ ಮನೆಗಳಿಗೆ ಎರಡು ಬಣ್ಣದ ಕಸದ ಬುಟ್ಟಿಗಳನ್ನು ನೀಡಿದ್ದೇವೆ. ಘನ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಪಂಚಾಯ್ತಿಗೆ ಅಲ್ಪ ಪ್ರಮಾಣದ ಲಾಭ ಬರುತ್ತಿದ್ದು,

ಮುಂದಿನ ದಿನಗಳಲ್ಲಿ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿಯೂ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಲಾಗುವುದು ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ವೆಂಕಟೇಶ್.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ