ಪಕ್ಷಿಯಂತೆ ರೆಕ್ಕೆ-ಮುಳ್ಳಿರುವ ವಿಚಿತ್ರ ಆಕಾರದ ಮೀನು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಡಗೋಡ,ಜು.11- ಪಟ್ಟಣದ ಹೊರ ವಲಯ ಯಲ್ಲಾಪುರ-ಕಲಘಟಗಿಗೆ ಹೋಗುವ ಮಾರ್ಗದಲ್ಲಿರುವ ಅಮ್ಮಾಜಿ ಕೆರೆಯಲ್ಲಿ ಹಾರುವ ಪಕ್ಷಿಯಂತೆ ರೆಕ್ಕೆ ಹಾಗೂ ಮುಳ್ಳು ಇರುವ ವಿಚಿತ್ರ ಆಕಾರದ ಮೀನು ಸಿಕ್ಕಿದ್ದು, ಜನರಲ್ಲಿ ಆಶ್ಚರ್ಯ ಮೂಡಿಸಿದೆ.

ವ್ಯಾಪಾರಸ್ಥರು ಸಾಮಾನ್ಯವಾಗಿ ಅಮ್ಮಾಜಿ ಕೆರೆಯಿಂದ ಮೀನು ಹಿಡಿದು ಇಲ್ಲಿನ ಮೀನನ್ನು ಮಾರುಕಟ್ಟೆಗೆ ತಂದಾಗ ಕಟ್ಲಾ, ಕಾಂಡಿ, ಗೌರಿ ಸೇರಿದಂತೆ ಕೆರೆಯಲ್ಲಿ ಸಿಗುವ ವಿವಿಧ ಜಾತಿಯ ತರುವರು. ಆದರೆ, ನಿನ್ನೆ ಏಕೈಕ ವಿಶೇಷ ಆಕಾರವುಳ್ಳ ಮೀನು ಸಿಕ್ಕಿದೆ.

ನೋಡುಗರ ಕಣ್ಮನ ಸೆಳೆಯುವಂತಿದ್ದ ಈ ಮೀನು ಪಟ್ಟಣ ಮೀನು ಮಾರುಕಟ್ಟೆಯಲ್ಲಿ ಒಂದು ಪ್ರದರ್ಶನದ ವಸ್ತುವಾಗಿತ್ತಲ್ಲದೆ ದಿನವಿಡೀ ಈ ಮೀನಿನದ್ದೇ ಚರ್ಚೆಯಾಗಿತ್ತು.

ಜೀವ ಉಳ್ಳ ಈ ಮೀನನ್ನು ಯಾರು ಕೂಡ ಖರೀದಿಸಲು ಮುಂದಾಗದೆ ಇದ್ದಾಗ ಕೊನೆಯಲ್ಲಿ ಅದೇ ಕೆರೆಗೆ ತೆಗೆದುಕೊಂಡು ಹೋಗಿ ಬಿಡಲಾಯಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ