ಶರತ್ ಬಚ್ಚೇಗೌಡಗೆ ರಮೇಶ್‍ಕುಮಾರ್ ನೀತಿ ಪಾಠ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ,ಡಿ.13- ಬಚ್ಚೇಗೌಡರ ಕುಟುಂಬ ಹಾಗೂ ನಮ್ಮ ಕುಟುಂಬದ ನಡುವೆ ಆತ್ಮೀಯತೆ ಇದೆ. ಶರತ್ ಗೆದ್ದ ನಂತರ ಆಶೀರ್ವಾದ ಪಡೆಯಲು ನನ್ನ ಬಳಿ ಬಂದಿದ್ದರೆಂದು ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಹೇಳಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಶರತ್ ಬಚ್ಚೇಗೌಡ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದಲ್ಲಿರುವ ನನ್ನ ನಿವಾಸಕ್ಕೆ ಬಂದು ಆಶೀರ್ವಾದ ಪಡೆದರು. ಆತ ಕೂಡ ನನ್ನ ಮಗ ಇದ್ದಂತೆ ಎಂದು ತಿಳಿಸಿದರು.

ಸಂಸದೀಯ ನಡಾವಳಿಗಳಲ್ಲಿ ಹೇಗಿರಬೇಕೆಂದು ಶರತ್‍ಗೆ ತಿಳಿಸಿಕೊಟ್ಟೆ. ಅಸೆಂಬ್ಲಿಗೆ ತಪ್ಪದೆ ಹೋಗಬೇಕು, ಹಿಂದಿನಂತೆ ರಾಜಕಾರಣ ಮಾಡಲಾಗದು. ಇಂದು ಜನರೊಂದಿಗೆ ಬೆರೆದು ಜನತಾಸೇವೆ ಮಾಡುವಂತೆ ಸಲಹೆ ಮಾಡಿದ್ದೇನೆ ಎಂದು ಹೇಳಿದರು.

ಬಿಜೆಪಿಗೆ ಶರತ್‍ರನ್ನು ಸೇರಿಸಿಕೊಳ್ಳುವುದಿಲ್ಲ ಎಂಬ ಮಾತಿದೆಯಲ್ಲ. ಅದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಇರಾದೆಯಿಂದ ನಿಮ್ಮ ಬಳಿ ಬಂದಿದ್ದಾರಾ ಎಂಬ ಪ್ರಶ್ನೆಗೆ, ನಾನು ಅಂತಹ ಸಣ್ಣ ರಾಜಕಾರಣ ಮಾಡುವವನಲ್ಲ.ಇದು ರಾಜಕಾರಣ ಮಾಡುವ ಸಂದರ್ಭವೂ ಅಲ್ಲ. ನನ್ನ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲಷ್ಟೇ ಶರತ್ ಬಂದಿದ್ದು. ನಾವು ಯಾವುದೇ ಗೌಪ್ಯ ಮಾತುಕತೆ ನಡೆಸಿಲ್ಲ ಎಂದು ರಮೇಶ್‍ಕುಮಾರ್ ಸ್ಪಷ್ಟಪಡಿಸಿದರು.

Facebook Comments