ಮಂಗಳೂರು ಬ್ರಾಂಡ್ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಜ.23- ಮಂಗಳೂರಿನ ಬ್ರಾಂಡ್ ಹಾಳಾಗುವಂತಹ ದುಷ್ಕøತ್ಯ ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಮಂಗಳೂರಿನ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಂಗಳೂರು ಸುಂದರ ನಗರ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಇಲ್ಲಿಗೆ ಹಲವಾರು ಮಂದಿ ಬರುತ್ತಾರೆ. ಮಂಗಳೂರಿಗೆ ಒಂದು ಬ್ರಾಂಡ್ ಇದೆ. ಅದನ್ನು ಹಾಳು ಮಾಡುವಂತೆ ಇತ್ತೀಚೆಗೆ ಕೆಲ ಕೃತ್ಯಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಕೆಲವು ವ್ಯಕ್ತಿಗಳು ಧಾರ್ಮಿಕ ಕೇಂದ್ರಗಳಿಗೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆದು ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ 4-5 ಪ್ರಕರಣಗಳು ವರದಿಯಾಗಿದ್ದು, ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಈ ಕೃತ್ಯಗಳಿಂದ ಮಂಗಳೂರಿನ ಬ್ರಾಂಡ್ ಹಾಳಾಗಲಿದೆ. ಅದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.

ಪೊಲೀಸರೇ ಎಲ್ಲಾ ಕಡೆ ಇರಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಜಾತಿ, ಅಥವಾ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆದು ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಧಾರ್ಮಿಕ ಕೇಂದ್ರಗಳ ಸಮಿತಿಯವರು ಮುಂಜಾಗ್ರತೆಯಾಗಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು. ಸಿಸಿಟಿವಿ ಅಳವಡಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

ದುಷ್ಕøತ್ಯಗಳನ್ನು ಎಸಗುವವರ ಬಗ್ಗೆ ಮಾಹಿತಿ ಇದ್ದರೆ ಜಿಲ್ಲಾ ಪೆÇಲೀಸ್ ನಿಯಂತ್ರಣ ಘಟಕದ ವಾಟ್ಸ್ ಅಪ್ ನಂಬರ್ 9480802300 ಸಂದೇಶ ಕಳುಹಿಸಿ ಅಥವಾ ಕರೆ ಮಾಡಿ, ಇಲ್ಲವೇ ವೈಯಕ್ತಿಕವಾಗಿ ನನಗೆ ಮಾಹಿತಿ ನೀಡಿ ಎಂದು ಆಯುಕ್ತರು ಮನವಿ ಮಾಡಿದ್ದಾರೆ. ಮಾಹಿತಿದಾರರ ಗೌಪ್ಯವನ್ನು ಕಾಪಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

Facebook Comments