ಶತಾಬ್ದಿ ಎಕ್ಸ್ ಪ್ರೆಸ್‍ ರೈಲಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಗ್ವಾಲಿಯಾರ್ , ಆ. 25- ದೆಹಲಿ- ಭೂಪಾಲ್ ಶತಾಬ್ದಿ ಎಕ್ಸ್‍ಪ್ರೆಸ್‍ನಲ್ಲಿ ಕೊಳೆತ ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಆಹಾರ ತಯಾರಿಸಲಾಗುತ್ತಿದೆ ಎಂಬ ದೂರಿನ ಮೇಲೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು.

ದಾಳಿಯ ವೇಳೆ ರೈಲಿನ ಅಡುಗೆಕೋಣೆಯಲ್ಲಿನ ಸ್ವಚ್ಛತೆ ಹಾಗೂ ಆಹಾರಕ್ಕೆ ಬಳಸುವ ಪದಾರ್ಥಗಳನ್ನು ಪರೀಕ್ಷೆಗೆಂದು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

ಕೆಲವು ದಿನಗಳಿಂದ ದೆಹಲಿ- ಭೂಪಾಲ್ ಶತಾಬ್ದಿ ಎಕ್ಸ್‍ಪ್ರೆಸ್‍ನಲ್ಲಿ ಕಳಪೆ ಗುಣಮಟ್ಟದ ಆಹಾರಗಳನ್ನು ನೀಡುತ್ತಿದ್ದಾರೆಂಬ ದೂರುಗಳು ಪದೇ ಪದೇ ಬರುತ್ತಿದ್ದವು. ಇಂದು ಅಧಿಕಾರಿಗಳು ತಪಾಸಣೆಗೆ ಬಂದಾಗ ಆಹಾರವನ್ನು ತಯಾರಿಸುವವರು ಹಾಗೂ ಸ್ವಚ್ಛತಾ ಕಾರ್ಯದ ಸಿಬ್ಬಂದಿಗಳು ಕೈಗೆ ಗ್ಲೌಸ್ ಹಾಗೂ ತಲೆಗೆ ಟೋಪಿಗಳನ್ನು ಹಾಕಿಕೊಳ್ಳದೆ ಆಹಾರ ತಯಾರಿಸುತ್ತಿದ್ದುದನ್ನು ನೋಡಿ ತರಾಟೆಗೆ ತೆಗೆದುಕೊಂಡರು.

ಆಹಾರಕ್ಕೆ ಬಳಸುತ್ತಿದ್ದ ಈರುಳ್ಳಿ, ಪನ್ನೀರ್, ಧಾನ್ಯಗಳನ್ನು ವಶಪಡಿಸಿಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಅಡುಗೆ ಕೋಣೆಯಲ್ಲಿದ್ದ 25 ಗ್ರಾಂ ಕೊಳೆತ ಈರುಳ್ಳಿಯನ್ನು ನಾಶಪಡಿಸಿದ್ದಾರೆ.

ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆಹಾರ ಒದಗಿಸುವ ಗುತ್ತಿಗೆಯನ್ನು ವೃಣದ್ವಾನ್ ಆಹಾರ ಕಂಪನಿಯವರು ತೆಗೆದುಕೊಂಡಿದ್ದು ಅವರ ಆರೋಪ ಸಾಬೀತಾದರೆ ಅವರ ವಿರುದ್ಧವು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಅಧಿಕಾರಿಗಳು ರವಿಕುಮಾರ್ ಅಗ್ರಾಹಾರಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments