ಕುರಿ-ಮೇಕೆ ಸಾಕಾಣಿಕೆಯಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ಮೂಲಕ ತೆಲಂಗಾಣಾ ರಾಜ್ಯದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಉದ್ಯಮಕಂಡುಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಉತ್ತೇಜನ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ತೆಲಂಗಾಣಾ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿ ಆದಾಗಿನಿಂದ ಕೋಳಿ ಹಾಗೂ ಕುರಿ ಮಾಂಸಕ್ಕೆ ಬೆಡಿಕೆ ಹೆಚ್ಚುತ್ತಿದೆ ಇದನ್ನು ಉದ್ಯಮವನ್ನಾಗಿ ಮೈಗೂಡಿಸಿಕೊಳ್ಳುವವರಿಗೆ ಇದು ಸಕಾಲ ಎಂದು ಅವರು ತಿಳಿಸಿದ್ದಾರೆ.

ತೆಲಂಗಾಣಾ ರಾಜ್ಯದ GVK-EMRI ಸಂಸ್ಥೆಯವರು ನಡೆಸುತ್ತಿರುವ 1962 ಪಶುವೈದ್ಯಕೀಯ ಸಹಾಯವಾಣಿಗೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಸಹಾಯವಾಣಿಯ ವೈಖರಿಯ ಕುರಿತು ನಿರ್ದೇಶಕ ಡಾ. ಕೃಷ್ಣಂರಾಜು ಅವರೊಂದಿಗೆ ಹಾಗೂ ತೆಲಂಗಾಣಾ ರಾಜ್ಯದ ಪಶುಸಂಗೋಪನೆ ಇಲಾಖೆಯ ಅಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದರು.

ಸುಮಾರು 42 ಎಕರೆ ಪ್ರದೇಶದಲ್ಲಿ ಸಹಾಯವಾಣಿಯನ್ನು ಅನುಷ್ಟಾನಗೊಳಿಸಲಾಗಿದೆ. 108, 100, 102 ಹಾಗೂ 1962 ಸಾಹಯವಾಣಿಗಳನ್ನು ಒಂದೇಡೆ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿರುವುದು ವಿಶೇಷ ಎಂದು ಸಚಿವರು ಹೇಳಿದರು. ಇದೇ ವೇಳೆ ತೆಲಂಗಾಣಾದ ಪಶುಸಂಗೋಪನೆ ಸಚಿವರಾದ ಶ್ರೀನಿವಾಸ ಯಾದವ್ ಅವರೊಂದಿಗೆ ಇಲಾಖೆಯಲ್ಲಿ ಹೊಸದಾಗಿ ಅನುಷ್ಣಾನಗೊಂಡ ಯೊಜನೆಗಳ ಕುರಿತು ಮಾತುಕತೆ ನಡೆಸಿದರು.
ಹೈದ್ರಾಬಾದನ ಸತ್ಯಂ ಶೀವಂ ಸುಂದರಂ ಗೋಶಾಲೆಗೆ ಸಚಿವರು ಭೇಟಿ ನೀಡಿ ಆಡಳಿತ ಮಂಡಳಿಯ ಸದ್ಯಸರು ಹಾಗೂ ಗೋಪಾಲಕರೊಂದಿಗೆ ಸಮಾಲೋಚನೆ ನಡೆಸಿದರು.

5435 ದೇಸಿ ಗೋವುಗಳಿಗೆ ಇಲ್ಲಿ ಆಶ್ರಯ ನೀಡಲಾಗಿದ್ದು ಖಾಸಗಿ ಸಂಸ್ಥೆಯವರಿಂದ ಗೋಶಾಲೆ ನಿರ್ವಹಣೆ ನಡೆಯುತ್ತಿದೆ. ತೆಲಂಗಾಣಾದ ಎಲ್ಲ ಗೋಶಾಲೆಗಳಿಗೆ ಪಶುಸಂಗೋಪನೆ ಇಲಾಖೆ ನಿರಂತರವಾದ ಸೇವೆಯನ್ನು ನೀಡುತ್ತಿರುವುದಕ್ಕೆ ಸಚಿವ ಪ್ರಭು ಚವ್ಹಾಣ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕರ್ನಾಟಕದಲ್ಲಿ ಅನುಷ್ಣಾನಗೊಂಡ ಪ್ರಾಣಿ ಕಲ್ಯಾಣ ಸಹಾಯವಾಣಿ, ಜಿಲ್ಲಾಗೊಂದು ಗೋಶಾಲೆ, ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ತೆಲಂಗಾಣ ಪಶುಸಂಗೋಪನೆ ಸಚಿವ ಶ್ರೀನಿವಾಸ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋಹತ್ಯೆ ತೆಲಂಗಾಣಾದಲ್ಲಿ ಅನುಷ್ಠಾನ ಮಾಡಲು ಚವ್ಹಾಣ್ ಸಲಹೆ: ತೆಲಂಗಾಣಾದಲ್ಲಿ ಕರ್ನಾಟದ ಮಾದರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ ಗೋಸಂರಕ್ಷಣೆಯಲ್ಲಿ ನೀವು ಕೈಜೋಡಿಸಿ ಎಂದು ತೆಲಂಗಾಣಾದಲ್ಲಿ ಪಶುಸಂಗೋಪನೆ ಸಚಿವ ಶ್ರೀನಿವಾಸ ಯಾದವ್ ಅವರಿಗೆ ಮನವಿ ಮಾಡಿದರು.  ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಲಿಸಲು ಆಲೋಚನೆ ಮಾಡುವುದಾಗಿ ಅವರಿ ತಿಳಿಸಿದ್ದಾರೆ.

ತರಬೇತಿಗೆ ಹೆಚ್ಚು ಒತ್ತು: ಸಾಹಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವಿಷೇಶವಾಗಿ ತರಬೇತಿಯನ್ನು ತೆಲಂಗಾಣಾ ಪಶುಸಂಗೋಪನೆ ಇಲಾಖೆ ನೀಡುತ್ತಿದೆ. ವಾಹನ ಚಾಲಕರಿಗೆ ದುರ್ಗಮ ಸ್ಥಳಗಳಿಗೆ ತೆರಳುವಾಗ ಹೇಗೆ ಎಚ್ಚರದಿಂದ ವಾಹನ ಓಡಿಸಬೇಕಂಬುದರು ಕುರಿತು ತರಬೇತಿ ನೀಡುತ್ತಾರೆ ಇದಲ್ಲದೇ ಅಂಬ್ಯುಲೇನ್ಸ್ ನಿರ್ವಹಣೆಯಲ್ಲಿರುವ ಸಿಬ್ಬಂದಿಗೆ ತರಬೇತಿ.

ಪಶುವೈದ್ಯಕೀಯ ನಿರ್ವಹಣೆ ಮಾಡುವ ಬಗ್ಗೆ ಪಶುವೈದ್ಯರು, ಪಶುಸಹಾಯಕರು ಎಲ್ಲರಿಗೂ ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಸೂಕ್ಷ್ಮಾವಾದ ವಿಷಯಗಳ ಬಗ್ಗೆ ಗಮನಹರಿಸಿ ತರಬೇತಿ ನೀಡುತ್ತಿರುವುದು ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಸಹಾಯ ಆಗುತ್ತದೆ ಎಂದು ಚವ್ಹಾಣ್ ತಿಳಿಸಿದ್ದಾರೆ. ರಾಜ್ಯದಲ್ಲಿಯೂ ಈ ಮಾದರಿಯ ತರಬೇತಿ ನೀಡಲು ಚಿಂತನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

Facebook Comments