ಕುರಿ ದೊಡ್ಡಿ ಮೇಲೆ ಬೀದಿ ನಾಯಿಗಳ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಜು.3- ತಾಲ್ಲೂಕಿನಲ್ಲಿ ಮತ್ತೆ ಕುರಿ ದೊಡ್ಡಿ ಮೇಲೆ ಬೀದಿ ನಾಯಿಗಳ ಹಾವಳಿ ಮುಂದುವರೆದಿದ್ದು , ಮತ್ತೆ ಐದು ಕುರಿಗಳನ್ನು ಸಾಯಿಸಿರುವ ಘಟನೆ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.

ರೈತ ಮಹಿಳೆ ರುಕ್ಮಿಣಮ್ಮ ಎಂಬುವರಿಗೆ ಸೇರಿದ ಕುರಿ ದೊಡ್ಡಿಗೆ ನುಗ್ಗಿದ ಬೀದಿ ನಾಯಿಗಳು ಐದು ಕುರಿಗಳನ್ನು ಕಚ್ಚಿ ಸಾಯಿಸಿವೆ.
ಕಳೆದ ಒಂದು ತಿಂಗಳಿನಿಂದ ನಾಲ್ಕು ಪ್ರತ್ಯೇಕ ನಾಯಿ ದಾಳಿಗಳಲ್ಲಿ 25 ಕುರಿಗಳು ಸಾವನ್ನಪ್ಪಿವೆ.

ಇದರಿಂದ ರೈತ ಮಹಿಳೆ ಕಂಗಾಲಾಗಿದ್ದು , ಇಡೀ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ ಗ್ರಾಮಸ್ಥರು ನಾಯಿಗಳನ್ನು ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.

Facebook Comments