Wednesday, April 24, 2024
Homeಅಂತಾರಾಷ್ಟ್ರೀಯಶೇಖ್ ಹಸೀನಾ ಭರ್ಜರಿ ಗೆಲುವು : 4ನೇ ಬಾರಿಗೆ ಬಾಂಗ್ಲಾ ಪ್ರಧಾನಿ ಪಟ್ಟ

ಶೇಖ್ ಹಸೀನಾ ಭರ್ಜರಿ ಗೆಲುವು : 4ನೇ ಬಾರಿಗೆ ಬಾಂಗ್ಲಾ ಪ್ರಧಾನಿ ಪಟ್ಟ

ಢಾಕಾ, ಜ.8- ಪ್ರಮುಖ ವಿರೋಧ ಪಕ್ಷವಾದ ಬಿಎನ್‍ಪಿ ಮತ್ತು ಅದರ ಮಿತ್ರಪಕ್ಷಗಳ ಬಹಿಷ್ಕಾರ ನಡುವೆ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಇಂದು ಪಲಿತಾಂಶ ಪ್ರಕಟಗೊಂಡಿದ್ದು ಸತತ ನಾಲ್ಕನೇ ಬಾರಿಗೆ ಶೇಖ್ ಹಸೀನಾ ಪ್ರಧಾನಿಯಾಗಿ ಜಯ ಸಾಧಿಸಿದ್ದಾರೆ.300ಸ್ಥಾನಗಳ ಸಂಸತ್ತಿನಲ್ಲಿ ಹಸೀನಾ ಅವರ ಅವಾಮಿ ಲೀಗ್ ಪಕ್ಷವು 223 ಸ್ಥಾನಗಳನ್ನು ಗೆದ್ದಿದ್ದು, ಅಗಾಧ ಬಹುಮತದಿಂದ ದಾಖಲೆಯ ನಾಲ್ಕನೇ ಅವಗೆ ಶೇಖ್ ಹಸೀನಾ ಪ್ರಧಾನಿಯಾಗಿ ಪಟ್ಟ ಅಲಂಕರಿಸಲಿದ್ದಾರೆ.


ಸಂಸತ್ತಿನಲ್ಲಿ ಪ್ರಮುಖ ವಿರೋಧ ಪಕ್ಷವಾದ ಜಾತಿಯಾ ಪಕ್ಷವು 11 ಸ್ಥಾನಗಳನ್ನು ಪಡೆದಿದೆ, ಬಾಂಗ್ಲಾದೇಶದ ಕಲ್ಯಾಣ್ ಪಕ್ಷವು ಒಂದು ಕ್ಷೇತ್ರದಲ್ಲಿ ಗೆದ್ದಿದೆ ಮತ್ತು ಸ್ವತಂತ್ರ ಅಭ್ಯರ್ಥಿಗಳು 62 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಜಾತೀಯ ಸಮಾಜ ತಾಂತ್ರಿಕ ದಳ ಮತ್ತು ಬಾಂಗ್ಲಾದೇಶದ ವರ್ಕರ್ಸ್ ಪಾರ್ಟಿ ತಲಾ ಒಂದು ಸ್ಥಾನ ಗಳಿಸಿವೆ.ಹಸೀನಾ ಅವಾಮಿ ಲೀಗ್‍ನ ಅಧ್ಯಕ್ಷೆಯೂ ಆಗಿದ್ದು, ಗೋಪಾಲ್‍ಗಂಜ್-3 ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿ, ಎಂಟನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ಇಡಿ ಅಧಿಕಾರಿಗಳ ಮೇಲಿನ ದಾಳಿಯ ವರದಿ ಕೇಳಿದ ರಾಜ್ಯಪಾಲರು

2009ರಿಂದ ವ್ಯೂಹಾತ್ಮಕವಾಗಿ ನೆಲೆಗೊಂಡಿರುವ ದಕ್ಷಿಣ ಏಷ್ಯಾದ ರಾಷ್ಟ್ರವನ್ನು ಆಳುತ್ತಿರುವ ಹಸೀನಾ, 1991ರಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ ನಂತರದ ದಾಖಲೆಯ ಸತತ ನಾಲ್ಕನೇ ಅವ ಮತ್ತು ಒಟ್ಟಾರೆ ಐದನೇ ಅವಯ ಪ್ರಧಾನಿ ಪಟ್ಟ ಪಡೆದಿದ್ದಾರೆ. ನಿನ್ನೆ ನಡೆದ ಚುನಾವಣೆಯಲ್ಲಿ ಚುನಾವಣಾ ಆಯೋಗವು ಅಂತಿಮ ಲೆಕ್ಕಾಚಾರದ ಪ್ರಕಾರ ಸುಮಾರು ಶೇ.40 ರಷ್ಟು ಮತದಾನವಾಗಿದೆ.ಈ ಗೆಲುವಿನೊಂದಿಗೆ ಹಸೀನಾ ಅವರು ಸ್ವಾತಂತ್ರ್ಯದ ನಂತರ ಬಾಂಗ್ಲಾದೇಶದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚುನಾವಣೆಯನ್ನು ಬಹಿಷ್ಕರಿಸಿ ಚುನಾವಣಾ ದಿನದಂದು ಮುಷ್ಕರವನ್ನು ಆಚರಿಸಿದ ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‍ಪಿ), ಮಂಗಳವಾರದಿಂದ ಶಾಂತಿಯುತ ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವ ಕಾರ್ಯಕ್ರಮದ ಮೂಲಕ ತನ್ನ ಸರ್ಕಾರಿ ವಿರೋಧಿ ಚಳವಳಿಯನ್ನು ತೀವ್ರಗೊಳಿಸಲು ಯೋಜಿಸಿದೆ ಎಂದು ಹೇಳಿದರು.

ಕಡಿಮೆ ಮತದಾನವಾಗಿರುವುದು ತಮ್ಮ ಬಹಿಷ್ಕಾರ ಚಳವಳಿ ಯಶಸ್ವಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪಕ್ಷದ ಆ ಮುಖಂಡರು ಹೇಳಿದ್ದಾರೆ. ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನಾ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗುವುದು ಮತ್ತು ಈ ಕಾರ್ಯಕ್ರಮದ ಮೂಲಕ ಜನರ ಮತದಾನದ ಹಕ್ಕನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

RELATED ARTICLES

Latest News