ಲೋಕಸಭಾ ಚುನಾವಣಾ : ದೆಹಲಿಯಲ್ಲಿ ಶೀಲಾದೀಕ್ಷಿತ್ ಸೇರಿ 6 ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.22- ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಲೋಕಸಭಾ ಚುನಾವಣಾ ಚಟುವಟಿಕೆಗಳು ಬಿರುಸುಗೊಂಡಿದ್ದು, ಇಂದು 6 ಮಂದಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾದೀಕ್ಷಿತ್, ಕಾಂಗ್ರೆಸ್ ಸದಸ್ಯ ಅಜಯ್ ಮಕೇನ್ ಪಟ್ಟಿಯಲ್ಲಿದ್ದಾರೆ. ಶೀಲಾ ದೀಕ್ಷಿತ್ ಅವರು ಈಶಾನ್ಯ (ಉತ್ತರ-ಪೂರ್ವ) ದೆಹಲಿಯಿಂದ ಹಾಗೂ ಅಜಯ್ ಮಕೇನ್ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಸಲಿದ್ದಾರೆ.

ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಜೆ.ಪಿ.ಅಗರ್‍ವಾಲ್, ಪೂರ್ವದೆಹಲಿಯ ಲೌಲಿ ಕ್ಷೇತ್ರದಿಂದ ಅರವಿಂದ್ ಸಿಂಗ್, ಉತ್ತರ-ಪಶ್ಚಿಮ ದೆಹಲಿಯಿಂದ ರಾಜೇಶ್ ಲಿಲೋಥಿಯಾ ಹಾಗೂ ಪೂರ್ವ ದೆಹಲಿಯಿಂದ ಮಹಾಬಲ್ ಮಿಶ್ರಾ ಅವರ ಹೆಸರನ್ನು ಅಧಿಕೃತಗೊಳಿಸಲಾಗಿದೆ.

ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ವಿರುದ್ಧ ಶೀಲಾ ದೀಕ್ಷಿತ್ ಸ್ಪರ್ಧೆಯೊಡ್ಡಲ್ಲಿದ್ದು, ಅಜಯ್ ಮೇಕನ್ ಸ್ಪರ್ಧಿಸುತ್ತಿರುವ ನವದೆಹಲಿ ಕ್ಷೇತ್ರಕ್ಕೆ ಬಿಜೆಪಿ ಇನ್ನು ಅಧಿಕೃತವಾಗಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಲ್ಲ.

ಪಶ್ಚಿಮ ದೆಹಲಿಯಲ್ಲಿ ಮಿಶ್ರಾ ಬಿಜೆಪಿಯ ಪ್ರವೇಶ್ ವರ್ಮಾವನ್ನು ಎದುರಿಸಲಿದ್ದಾರೆ. ಆದರೆ ಅಗರ್ವಾಲ್ ಅವರು ಚಾಂದನಿ ಚೌಕ್ ಕ್ಷೇತ್ರದಲ್ಲಿ ಡಾ. ಹರ್ಷವರ್ಧನ್ ವಿರುದ್ಧ ಸೆಣಸಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ