ವಿಶ್ವಕಪ್ ನ ಉಳಿದ ಪಂದ್ಯಗಳಿಗೆ ಶಿಖರ್ ಧವನ್ ಅಲಭ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜೂ.11- ಆರಂಭಿಕ ಸ್ಫೋಟಕ ಬ್ಯಾಟ್ಸ್‍ಮನ್ ಶಿಖರ್ ದವನ್ ಕೈನ ಹೆಬ್ಬೆರಳು ಗಾಯದಿಂದ ನರಳುತ್ತಿದ್ದು, ಐಸಿಸಿ ವಿಶ್ವಕಪ್ ಕ್ರಿಕೆಟ್‍ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜೂ.9ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಶಿಖರ್ ದವನ್ ಅವರ ಕೈಗೆ ಚೆಂಡು ತಗುಲಿ ಪೆಟ್ಟಾಗಿತ್ತು. ಆದರೂ ಕೂಡ ಅದರ ಬಗ್ಗೆ ಗಮನ ಹರಿಸದೆ ಶತಕ ಬಾರಿಸಿ (117) ಪಂದ್ಯದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

ಮೂಳೆ ಮುರಿದಿಲ್ಲ ಎಂದು ವೈದ್ಯರು ತಿಳಿಸಿದರೂ ಕೂಡ ಊತ ಕಡಿಮೆಯಾಗಿಲ್ಲ. ಅದನ್ನು ನಿರ್ಲಕ್ಷಿಸಿದರೆ ಮುಂದೆ ಗಂಭೀರ ಪರಿಣಾಮ ಎದುರಾಗಬಹುದು ಎಂಬ ಹಿನ್ನೆಲೆಯಲ್ಲಿ ಮೈದಾನಕ್ಕಿಳಿಯದಂತೆ ಅವರಿಗೆ ಸಲಹೆ ನೀಡಲಾಗಿದೆ. ಆದರೆ, ಅಧಿಕೃತವಾಗಿ ಅವರು ಪಂದ್ಯಗಳಿಂದ ದೂರ ಉಳಿಯುತ್ತಾರೆಯೇ ಎಂಬುದು ಇನ್ನೂ ಖಚಿತಗೊಂಡಿಲ್ಲ.

ಇದರೊಂದಿಗೆ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬ ಬಗ್ಗೆ ಸಮಸ್ಯೆಗಳು ಮತ್ತೆ ಹುಟ್ಟಿಕೊಂಡಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಧವನ್ ವೈದಕೀಯ ವರದಿಗಾಗಿ ಬಿಸಿಸಿಐ ಕಾಯುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ