7 ಸಾವಿರ ಕ್ಲಬ್‍ಗೆ ಸೇರಲು ಧವನ್ ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

ಗುಹಾನಾ, ಆ.6- ವೆಸ್ಟ್‍ಇಂಡೀಸ್ ವಿರುದ್ಧ ನಡೆಯುವ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಕ್ಲೀನಂ ಸ್ವೀಪ್ ಮಾಡುವತ್ತ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಚಿತ್ತ ಹರಿಸಿದ್ದರೆ, ತಂಡದ ಆರಂಭಿಕ ಆಟಗಾರ ಶಿಖರ್ ಧವನ್ 7 ಸಾವಿರ ರನ್ ಗಳಿಸಲು ಕಾತರದಿಂದಿದ್ದಾರೆ.

ಶಿಖರ್ ಧವನ್ ಈ ಕ್ಲಬ್‍ಗೆ ಸೇರಲು ಕೇವಲ 47 ರನ್‍ಗಳು ಬೇಕಾಗಿದೆ. ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‍ನಲ್ಲಿ ಧವನ್ 1334 ರನ್ ಗಳಿಸಿದ್ದರೆ, ಐಪಿಎಲ್‍ನಲ್ಲಿ 4579 ರನ್‍ಗಳನ್ನು ದಾಖಲಿಸಿದ್ದು 7 ಸಾವಿರ ರನ್ ಗಳಿಸಿದ 4ನೆ ಆಟಗಾರರಾಗಿ ಗುರುತಿಸಿಕೊಳ್ಳಲು ಧವನ್ ಚಿತ್ತ ಹರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 15 ಮಂದಿ ಬ್ಯಾಟ್ಸ್‍ಮನ್‍ಗಳು 7 ಸಾವಿರ ರನ್‍ಗಳನ್ನು ದಾಖಲಿಸಿದ್ದಾರೆ. ಈಗಾಗಲೇ ಟೀಂ ಇಂಡಿಯಾದ ನಾಯಕ ಚುಟುಕು ಕ್ರಿಕೆಟ್‍ನಲ್ಲಿ 8416 ರನ್ ಗಳಿಸಿ ಅಗ್ರಮಾನ್ಯರಾಗಿದ್ದರೆ, ಸುರೇಶ್‍ರೈನಾ (8392), ರೋಹಿತ್ ಶರ್ಮಾ (8291), ಶಿಖರ್ ಧವನ್ (6953), ಮಹೇಂದ್ರಸಿಂಗ್ ಧೋನಿ (6621) ನಂತರದ ಸ್ಥಾನಗಳಲ್ಲಿದ್ದಾರೆ.

Facebook Comments