ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜಮೀನು ನೀಡದ ತಂದೆ, ಮನೆ ಮುಂದೆ ಶವವಿಟ್ಟು ಕುಳಿತ ಮಗ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ,ಅ.17- ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜಮೀನು ನೀಡದ ತಂದೆ..! ಮನೆಯ ಬಳಿಯೇ ಶವವಿಟ್ಟು ಕಾದು ಕುಳಿತಿರುವ ಮಗ…ಇಂಥದೊಂದು ಘಟನೆ ರಿಪ್ಪನ್‍ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ನಾಗರಾಜ್ ಪತ್ನಿ ನಾಗರತ್ನ(50) ನಿಧನರಾಗಿದ್ದು, ಆತನ ಮಗ ಗಣೇಶ್ ತಾಯಿಯ ಅಂತ್ಯಸಂಸ್ಕಾರಕ್ಕೆ ತಂದೆ ನಾಗರಾಜ್ ಜಮೀನಿನಲ್ಲಿ ಜಾಗ ನೀಡಲು ನಿರಾಕರಿಸಿದ್ದಾರೆ.

ಮೊದಲ ಪತ್ನಿ ನಾಗರತ್ನ ಅಂತ್ಯಸಂಸ್ಕಾರ ಮಾಡಲು ಜಮೀನಿನಲ್ಲಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಮಗ ಗಣೇಶ ತನ್ನ ತಾಯಿಯ ಶವವನ್ನು ಮನೆ ಮುಂದೆಯೇ ಇಟ್ಟು ಕಾದು ಕುಳಿತಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ನಾಗರಾಜ್‍ನೊಂದಿಗೆ ಮಾತುಕತೆ ನಡೆಸಿದ್ದಾರೆ. ಕ್ಯಾನ್ಸರ್‍ನಿಂದ ನಾಗರತ್ನ ಮೃತಪಟ್ಟಿದ್ದಾರೆ.

Facebook Comments