ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ : ಶಿವಮೊಗ್ಗ ನಗರದಲ್ಲಿ ಕಫ್ರ್ಯೂ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಡಿ.4- ನಗರದಲ್ಲಿ ನಿನ್ನೆ ಬೆಳಗ್ಗೆ ಭಜರಂಗದಳ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಬೆನ್ನಲ್ಲೆ ಪ್ರತೀಕಾರದ ಅಹಿತಕರ ಘಟನೆಗಳು ಸಂಭವಿಸಿದ ಪರಿಣಾಮ ಶಿವಮೊಗ್ಗದ ಅರ್ಧಭಾಗ ವ್ಯಾಪ್ತಿಯಲ್ಲಿ ಇಂದು ಹಗಲು ಕಫ್ರ್ಯೂ ವಿಧಿಸಲಾಗಿದೆ.

ಶಿವಮೊಗ್ಗನಗರದ ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲಿಸ್ ಠಾಣ ವ್ಯಾಪ್ತಿಯಲ್ಲಿ ಹಲ್ಲೆ, ವಾಹನಗಳನ್ನು ಜಖಂ ಗೊಳಿಸುವಂತಹ ಹತ್ತು ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ ಇಂದು ಬೆಳಿಗ್ಗೆವರೆಗೆ ಒಟ್ಟು 62 ಜನರನ್ನು ಬಂಧಿಸಲಾಗಿದೆ ಎಂದು ಪೂರ್ವವಲಯ ಐಜಿಪಿ ಎಸ್.ರವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಾಗಿ ನಗರಾದ್ಯಂತ ನಿನ್ನೆ ಮಧ್ಯಾಹ್ನದಿಂದ ಶನಿವಾರ ಬೆಳಿಗ್ಗೆ 10ರ ವರೆಗೆ 144 ಸೆಕ್ಷನ್ ಜಾರಿಗೊಳಿಸಿದ್ದು, ಮೇಲ್ಕಂಡ 3 ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಇದನ್ನು ಇಂದು ಪೂರ್ಣ ದಿನಕ್ಕೆ ವಿಸ್ತರಿಸಲಾಗಿದೆ ಎಂದರು.

ಶಿವಮೊಗ್ಗ ನಗರಕ್ಕೆ ಜಿಲ್ಲೆಯ ವಿವಿದೆಡೆ ಯಿಂದ ಮತ್ತು ಹೊರ ಜಿಲ್ಲೆಗಳಿಂದಲೂ ಈ ಮೊದಲು ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಅಧಿಕಾರಿಗಳನ್ನು ಕರೆಸಲಾಗಿದ್ದು, ಗಸ್ತು ವ್ಯವಸ್ಥೆ ಮತ್ತು ಕಿಡಿಗೇಡಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದ ಅವರು, 3 ಠಾಣಾ ವ್ಯಪ್ತಿಗಳಲ್ಲಿ 148 ಸೂಕ್ಷ್ಮ ಮತ್ತು 6 ಅತೀ ಸೂಕ್ಷ್ಮ ಪ್ರದೇಶವನ್ನು ಗುರುತಿಸಿ ಅಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.

ಇದಲ್ಲದೇ ನಗರಕ್ಕೆ ಪ್ರವೇಶಿಸಬಹುದಾದ ಪ್ರಮುಖ ರಸ್ತೆಗಳಲ್ಲಿ ಚೆಕ್ ಪೊಸ್ಟ್ ತೆರೆದು ಕಿಡಿಗೇಡಿಗಳು ಹೊರಗಿನಿಂದ ನಗರಕ್ಕೆ ಬಂದು ದುಷ್ಕøತ್ಯ ನಡೆಸದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.  ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ನಾಳೆ ಪುನಃ ನಿಷೇಧಾಜ್ಞಾ ಹಾಗೂ ಕಫ್ರ್ಯೂ ಮುಂದುವರಿಕೆ ಬಗ್ಗೆ ನಿರ್ಧರಿಸಲಾಗುವುದು. ನಿನ್ನೆಯ ಘಟನೆ ಹಿಂದೆ ಕೋಮು ದ್ವೇಷದ ಹಿನ್ನೆಲೆ ಬಗ್ಗೆ ಪರಾಮರ್ಷಿಸಲು ಈಗ ಸಕಾಲವಲ್ಲ. ಪ್ರಸ್ತುತ ನಗರದಲ್ಲಿ ಶಾಮತಿ ಸುವ್ಯವ್ಯಸ್ಥೆ ಸಹಜ ಸ್ಥಿತಿಗೆ ತರುವುದು ನಮ್ಮ ಮುಂದಿರುವ ಸವಾಲು ಎಂದು ಪ್ರಶ್ನೆ ಒಂದಕ್ಕೆ ಅವರು ಉತ್ತರಿಸಿದರು.

ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಕೆಲವು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಐಜಿಪಿ ವಿನಂತಿಸಿದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆಯವರ ಕೋರಿಕೆಯಂತೆ 10 ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದರು. ಎಸ್‍ಪಿ ಶಾಂತರಾಜು ಉಪಸ್ಥಿತರಿದ್ದರು.

Facebook Comments