ಶಿವಮೊಗ್ಗ-ಬೆಂಗಳೂರು ಶತಾಬ್ಧಿ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ

ಈ ಸುದ್ದಿಯನ್ನು ಶೇರ್ ಮಾಡಿ

Yadiytruapp-0-1

ಶಿವಮೊಗ್ಗ , ಫೆ.4- ಸ್ಥಳೀಯರ ಬಹು ದಿನದ ಬೇಡಿಕೆಯಾಗಿದ್ದ ಶಿವಮೊಗ್ಗ ಬೆಂಗಳೂರು ನಡುವಿನ ಶತಾಬ್ಧಿ ರೈಲು ಸಂಚಾರಕ್ಕೆ ಇಂದು ಸಂಸದ ಬಿ.ವೈ. ರಾಘವೇಂದ್ರ ಹಸಿರು ನಿಶಾನೆ ತೋರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವರ ಬಳಿ ಈ ಕುರಿತು ಪ್ರಸ್ತಾಪ ಮುಂದಿಟ್ಟು ಇದರ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿದರು.

ಕಳೆದ ತಿಂಗಳು ರೈಲ್ವೆ ಇಲಾಖೆ ಇದಕ್ಕೆ ಹಸಿರು ನಿಶಾನೆ ತೋರಿತ್ತು. ಶಿವಮೊಗ್ಗ ನಗರ ರೈಲು ನಿಲ್ದಾಣದಿಂದ ಪ್ರತಿ ದಿನ ಬೆಳಗ್ಗೆ 5.15ಕ್ಕೆ ಹೊರಡುವ 10 ಗಂಟೆಯ ವೇಳೆಗೆ ಬೆಂಗಳೂರು ತಲುಪುತ್ತದೆ.

ನಂತರ ಸಂಜೆ 5.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10.15ಕ್ಕೆ ಶಿವಮೊಗ್ಗ ತಲುಪಲಿದೆ. ಈ ಹಿಂದೆ ಪ್ರಸ್ತುತ ಜನಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಮಾತ್ರ ಸಂಚರಿಸುತ್ತಿತ್ತು.

ಯಶವಂತಪುರ ರೈಲು ನಿಲ್ದಾಣದವರೆಗೆ ಮಾತ್ರ ಸೇವೆ ಇತ್ತು. ಈಗ ರೈಲಿನ ಬೋಗಿಗಳನ್ನು ಕೂಡ ಹೆಚ್ಚಿಸಲಾಗಿದ್ದು , ಅದರಲ್ಲಿ ಎಸಿ ಬೋಗಿ ಸೇರಿದಂತೆ 12 ಬೋಗಿಗಳನ್ನು ಅಳವಡಿಸಲಾಗಿದೆ.

ವೇಳಾಪಟ್ಟಿ: ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 10.15ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಂಜೆ 5.30ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 10.25ಕ್ಕೆ ಶಿವಮೊಗ್ಗ ತಲುಪಲಿದೆ. ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಈ ರೈಲಿನ ಸಂಚಾರ ಇರುತ್ತದೆ.

Facebook Comments