ಹೈವೋಲ್ಟೇಜ್ ಕ್ಷೇತ್ರ ಶಿವಮೊಗ್ಗದಲ್ಲಿ ಮತದಾನಕ್ಕೆ ಜಿಲ್ಲಾಡಳಿತ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಏ. 20- ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ, ಪ್ರಸ್ತುತ ಚುನಾವಣೆಯಲ್ಲಿ ಒಟ್ಟಾರೆ 16,75,975 ಜನರು ಮತದಾನದ ಅರ್ಹತೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಸಂಖ್ಯೆ 2 ಲಕ್ಷಕ್ಕೂ ಅಧಿಕವಿದ್ದರೆ, ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 2 ಲಕ್ಷಕ್ಕಿಂತ ಕಡಿಮೆಯಿದೆ.

ಶಿವಮೊಗ್ಗ ನಗರ, ಬೈಂದೂರು, ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು ಮತದಾರರಿದ್ದಾರೆ. ಸಾಗರ, ಶಿಕಾರಿಪುರ, ಸೊರಬ ಹಾಗೂ ತೀರ್ಥಹಳ್ಳಿಗಳಲ್ಲಿ 2 ಲಕ್ಷಕ್ಕಿಂತ ಕಡಿಮೆಯಿದೆ. ಉಳಿದಂತೆ ಶಿವಮೊಗ್ಗ ನಗರ ಕ್ಷೇತ್ರ ವ್ಯಾಪ್ತಿಯು ಅತ್ಯಧಿಕ ಮತದಾರರಿರುವ ಕ್ಷೇತ್ರವಾಗಿದ್ದರೆ, ತೀರ್ಥಹಳ್ಳಿ ಅಸೆಂಬ್ಲಿಯೂ ಕಡಿಮೆ ಮತದಾರರಿರುವ ಕ್ಷೇತ್ರವಾಗಿದೆ.

ಒಟ್ಟಾರೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಮಹಿಳೆಯರು 8,44,740 ರಷ್ಟಿದ್ದರೆ, ಪುರುಷರ ಸಂಖ್ಯೆ 8,31,185 ಇದೆ. ಅಸೆಂಬ್ಲಿವಾರು ಗಮನಿಸಿದರೆ ಶಿಕಾರಿಪುರ ಹಾಗೂ ಸೊರಬ ಹೊರುಪಡಿಸಿ, ಉಳಿದ ಆರು ಕ್ಷೇತ್ರಗಳಲ್ಲಿಯೂ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಇತರೆ ವರ್ಗದ ಮತದಾರರ ಸಂಖ್ಯೆ 50 ಆಗಿದೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ವಿವರ ಇಂತಿದೆ: ಶಿವಮೊಗ್ಗ ಗ್ರಾಮಾಂತರದಲ್ಲಿ 2,12,251 (ಪುರುಷ: 1,05,748, ಮಹಿಳೆ : 1,06,500, ಇತರೆ: 3), ಭದ್ರಾವತಿ 2,09,273 (ಪು : 1,02,285, ಮ : 1,06,986, ಇ : 2), ಶಿವಮೊಗ್ಗ 2,63,206 (ಪು : 1,29,606, ಮ : 1,33,580, ಇ : 20), ತೀರ್ಥಹಳ್ಳಿ 1,85,457 (ಪು : 91,906, ಮ : 93,548, ಇ : 3), ಶಿಕಾರಿಪುರ 1,91,955 (ಪು: 97,199, ಮ : 94,746, ಇ : 10), ಸೊರಬ 1,87,744 (ಪು : 95,277, ಪು: 92,457, ಇ : 10), ಸಾಗರ 1,99,502 (ಪು : 98,927, ಮ : 1,00,574, ಇ : 1) ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 2,26,587 (ಪುರುಷ : 1,10,237, ಮಹಿಳೆ : 1,16,349, ಇ : 1) ಮತದಾರರಿದ್ದಾರೆ.

ಶಿವಮೊಗ್ಗ ಗ್ರಾಮಾಂತರದ ಹಾರೋಬೆನವಳ್ಳಿಯ ಎರಡು ಮತಗಟ್ಟೆ ಹಾಗೂ ಸಾಗರದ ಬಾಳಿಗದಲ್ಲಿ ಬುಡಕಟ್ಟು ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಭದ್ರಾವತಿಯ ಸಿಟಿ ಮುನ್ಸಿಪಲ್ ಕಚೇರಿ ಹಾಗೂ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಅಂಗವಿಕಲರಿಗೆ ಮತಗಟ್ಟೆ ಹಾಗೂ ಏಳು ಕ್ಷೇತ್ರಗಳಲ್ಲಿ 14 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ಕೇಂದ್ರಗಳು: ಮಸ್ಟರಿಂಗ್-ಡಿಮಸ್ಟರಿಂಗ್ ಕೇಂದ್ರಗಳು. ಶಿವಮೊಗ್ಗ – ಎನ್‍ಇಎಸ್ ಕಾಲೇಜು ಹಾಗೂ ನಾಗಪ್ಪ ಶ್ರೇಷ್ಠಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜು, ಭದ್ರಾವತಿ – ಸಂಚಿ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜು, ಶಿವಮೊಗ್ಗ – ಸಹ್ಯಾದ್ರಿ ಕಾಮರ್ಸ್ ಕಾಲೇಜ್, ತೀರ್ಥಹಳ್ಳಿ – ಯು.ಆರ್.ಅನಂತಮೂರ್ತಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿಕಾರಿಪುರ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಗರ – ಸರ್ಕಾರಿ ಜೂನಿಯರ್ ಕಾಲೇಜು, ಸಾಗರ – ಸರ್ಕಾರಿ ಜ್ಯೂನಿಯರ್ ಕಾಲೇಜು, ಬೈಂದೂರು – ಸರ್ಕಾರಿ ಜೂನಿಯರ್ ಕಾಲೇಜು.

ವಿಧಾನಸಭಾ ಕ್ಷೇತ್ರ : 8  ಒಟ್ಟುಮತದಾರರು : 16,75,975
ಶಿವಮೊಗ್ಗ ಗ್ರಾಮಾಂತರ – 2,12,251,  ಭದ್ರಾವತಿ -2,09,273,   ಶಿವಮೊಗ್ಗ – 2,63,206,  ತೀರ್ಥಹಳ್ಳಿ – 1,85,457
ಶಿಕಾರಿಪುರ – 1,91,955, ಸೊರಬ – 1,87,744,  ಸಾಗರ – 1,99,502, ಬೈಂದೂರು – 2,26,587

2021 ಬೂತ್‍ಗಳ ಸ್ಥಾಪನೆ: ಮತದಾನಕ್ಕೆ ಕ್ಷೇತ್ರ ವ್ಯಾಪ್ತಿಯಲ್ಲಿ 2021 ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 247, ಭದ್ರಾವತಿಯಲ್ಲಿ 253, ಶಿವಮೊಗ್ಗದಲ್ಲಿ 282, ತೀರ್ಥಹಳ್ಳಿಯಲ್ಲಿ 258, ಶಿಕಾರಿಪುರದಲ್ಲಿ 232, ಸೊರಬದಲ್ಲಿ 239, ಸಾಗರದಲ್ಲಿ 264 ಹಾಗೂ ಬೈಂದೂರಿನಲ್ಲಿ 246 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಮತದಾನ ಕಾರ್ಯಕ್ಕೆ ಪಿಆರ್‍ಓ, ಎಪಿಆರ್‍ಓ, ಪಿಓ ಸೇರಿದಂತೆ 4042 ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ