ಮುಂಬೈ ಪಾಲಿಕೆ ಉಪ ಆಯುಕ್ತ ದೀಕ್ಷಿತ್ ಕೋವಿಡ್‍ಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.10- ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಉಪ ಆಯುಕ್ತ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ. ಶಿರೀಶ್ ದೀಕ್ಷಿತ್ ಮೃತ ಅಧಿಕಾರಿಯಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಅವರ ಕುಟುಂಬದವರು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಅದರಿಂದಾಗಿ ಆರೋಗ್ಯ ಇಲಾಖೆಯ ವೈದ್ಯರು ಮನೆಗೆ ಬಂದು ಪರೀಕ್ಷೆ ನಡೆಸಿದ್ದರು.

ಈ ವೇಳೆ ಅವರು ಸಾವನ್ನಪ್ಪಿದರು. ತಡರಾತ್ರಿ ವರದಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಸಾಬೀತಾಗಿದೆ. ಇದರಿಂದಾಗಿ ಅಧಿಕಾರಿಗಳು ಆತಂಕಗೊಂಡಿದ್ದಾರೆ. ಹಲವು ದಿನಗಳಿಂದ ಪಾಲಿಕೆಯಿಂದ ಜನರ ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ ನೀಡಲಾಗುತ್ತಿತ್ತು ಇದರಲ್ಲಿ ಶಿರೀಶ್ ದೀಕ್ಷಿತ್ ಅವರು ಕೂಡ ಕೊರೊನಾ ನಿಯಂತ್ರಣಕ್ಕೆ ಮಹತ್ತರ ಪಾತ್ರ ವಹಿಸಿದ್ದರು.

ಆದರೆ ಇವರಿಗೇ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿರುವುದು ನಿಜಕ್ಕೂ ಸಹ ಶೋಚನೀಯ ಸಂಗತಿಯಾಗಿದೆ. ನಿನ್ನೆಯವರೆಗೆ ಬೃಹತ್ ಮುಂಬೈ ಪಾಲಿಕೆಯ ಸುಮಾರು 55 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Facebook Comments