ವಿವಾದಕ್ಕೆ ಕಾರಣವಾಯ್ತು ಶಿವಸೇನೆಯ ಜಾಹಿರಾತು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಆ.5- ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆದ ರಾಮಮಂದಿರ ಭೂಮಿಪೂಜೆ ಸಮಾರಂಭದಂದು ಶಿವಸೇನಾದ ಸಾಮ್ನಾ ಪತ್ರಿಕೆಯ ಮುಖಪುಟದಲ್ಲಿ ಮುದ್ರಿಸಿರುವ ಜಾಹಿರಾತು ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದೆ.

ಸಾಮನಾ ಪತ್ರಿಕೆಯ ಮುಖಪುಟದಲ್ಲಿ ಬಾಲಾಸಾಹೇಬ್ ಠಾಕ್ರೆ ಅವರ ಫೋಟೋದೊಂದಿಗೆ ಬಾಬರಿ ಮಸೀದಿ ಧ್ವಂಸದ ಚಿತ್ರವನ್ನು ಮುದ್ರಿಸಿ ಇದನ್ನು(ಮಸೀದಿ ಉರುಳಿಸುವಿಕೆ) ಮಾಡಿದ ಪುರುಷರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಬರೆಯಲಾಗಿದೆ.

ಶಿವಸೇನೆ ಕಾರ್ಯದರ್ಶಿ ಮಿಲಿಂದ್ ನರ್ವೇಕರ್ ಅವರು ನೀಡಿರುವ ಜಾಹೀರಾತಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಸಚಿವ ಆದಿತ್ಯ ಠಾಕ್ರೆ ಅವರ ಫೋಟೋಗಳೂ ಇವೆ.

ಕುತೂಹಲಕಾರಿ ಸಂಗತಿಯೆಂದರೆ, ಅಯೋಧ್ಯೆಯಲ್ಲಿ ನಡೆಯುವ ಐತಿಹಾಸಿಕ ಕಾರ್ಯಕ್ರಮಕ್ಕೆ ಶಿವಸೇನೆಗೆ ಯಾವುದೇ ಆಹ್ವಾನ ನೀಡಿಲ್ಲ. ಬಾಬ್ರಿ ಮಸೀದಿ ಉರುಳಿಸುವಿಕೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ ಎಂದು ಶಿವಸೇನೆ ತನ್ನ ಸಾಮನಾದಲ್ಲಿ ಬರೆದಿಕೊಂಡಿತ್ತು. ಆದಾಗ್ಯೂ ರಾಮ ಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಶಿವಸೇನೆಯನ್ನು ಆಹ್ವಾನಿಸಲಾಗಿಲ್ಲ.

Facebook Comments

Sri Raghav

Admin