ಕರ್ನಾಟಕ ಸರ್ಕಾರದ ತಿಥಿ ಮಾಡಿ, ಪಿಂಡ ಬಿಟ್ಟು ಶಿವಸೇನೆ-ಎಂಇಎಸ್ ಪುಂಡರ ಪುಂಡಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಜ.16- ಕರ್ನಾಟಕ ಸರ್ಕಾರದ ತಿಥಿ ಮಾಡಿ ದೂದ್‍ಗಂಗಾ ನದಿಯಲ್ಲಿ ಪಿಂಡ ಬಿಡುವ ಮೂಲಕ ಶಿವಸೇನೆ ಕಾರ್ಯಕರ್ತರು ಗಡಿಯಲ್ಲಿ ವಿಕೃತಿ ಮೆರೆದಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೊನಗೋಳಿ ರಾಷ್ಟ್ರೀಯ ಹೆದ್ದಾರಿ ಬಳಿ ಶಿವಸೇನೆ, ಎಂಇಎಸ್ ಕಾರ್ಯಕರ್ತರು ಪುಂಡಾಟ ನಡೆಸಿದ್ದು, ಈ ವಿಕೃತಿ ಮಾಡುವ ಮೂಲಕ ಗಡಿಯಲ್ಲಿ ಸೌಹಾರ್ದತೆಯನ್ನು ಕೆದಕಿದ್ದಾರೆ.

ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಸಂಘಟಿಸಿರುವ ನಾಡದ್ರೋಹಿಗಳು ಸಮ್ಮೇಳನದ ಹೆಸರಲ್ಲಿ ಭಾಷಾ ವಿಷಬೀಜ ಬಿತ್ತುತ್ತಿದ್ದಾರೆ. ಮಹಾರಾಷ್ಟ್ರ ರಾಜಕಾರಣಿಗಳಿಗೆ ಮಹಾ ಸಾಹಿತಿಗಳು ಕೂಡ ಧ್ವನಿಗೂಡಿಸಿದ್ದಾರೆ. ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ನೀಡುವಂತೆ ಎಂಇಎಸ್ ಪುಂಡರು ಪಟ್ಟು ಹಿಡಿದಿದ್ದಾರೆ.

ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಅನುಮತಿ ಕೇಳಿದ್ದಾರೆ. ಮರಾಠಿ ಸಮ್ಮೇಳನ ನಡೆಸಲು ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಗಡಿಯಲ್ಲಿ ಮರಾಠಿ ಕನ್ನಡಿಗರ ಹೋರಾಟದ ಕಿಚ್ಚು ಹೆಚ್ಚಾಗಲಿರುವ ಸನ್ನಿವೇಶ ಸೃಷ್ಟಿಯಾಗಿದೆ.

Facebook Comments