ಕರಸೇವಕರ ತ್ಯಾಗ ಮರೆತವರು ರಾಮದ್ರೋಹಿಗಳು : ಶಿವಸೇನೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಆ.5- ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಸಂದರ್ಭದಲ್ಲಿ ಕರಸೇವಕರ ತ್ಯಾಗವನ್ನು ಮರೆಯುವವರು ರಾಮದ್ರೋಹಿಗಳು ಎಂದು ಶಿವಸೇನೆ ಹೇಳಿದೆ.

ರಾಮಮಂದಿರವು ಇಡೀ ದೇಶ ಮತ್ತು ಹಿಂದೂಗಳಿಗೆ ಸೇರಿದ್ದು, ಇದು ಯಾವುದೇ ಪಕ್ಷ ಅಥವಾ ವ್ಯಕ್ತಿಗಳಿಗೆ ಸೇರಿದ್ದಲ್ಲ. ಆದರೆ, ಶಿಲಾನ್ಯಾಸ ಸಮಾರಂಭವು ವ್ಯಕ್ತಿಗತ ಮತ್ತು ರಾಜಕೀಯ ಪಕ್ಷದ ಕೇಂದ್ರೀಕೃತವಾಗಿದೆ ಎಂದು ಶಿವಸೇನೆ ಪಕ್ಷದ ಮುಖವಾಣಿ ಮತ್ತು ಮರಾಠಿ ದಿನಪತ್ರಿಕೆ ಸಾಮ್ನಾದ ಸಂಪಾದಕೀಯಲ್ಲಿ ಟೀಕಿಸಲಾಗಿದೆ.

ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಕರಸೇವಕರು ಮತ್ತು ರಾಮಭಕ್ತರ ತ್ಯಾಗದ ವಾಸನೆ ಇದೆ. ಈ ಸಂದರ್ಭದಲ್ಲಿ ಅವರ ತ್ಯಾಗವನ್ನು ಮರೆತವರು ಮತ್ತು ಮರೆಯುವವರು ರಾಜದ್ರೋಹಿಗಳು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಟೀಕಿಸಿದೆ.

Facebook Comments

Sri Raghav

Admin