ರಮೇಶ್‍ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಚಿತ್ರ ಈ ವಾರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ವಿಭಿನ್ನ ಕಥೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಆದರೆ, ಬೆರಳೆಣಿಕೆ ಚಿತ್ರಗಳು ಮಾತ್ರ ಗಮನ ಸೆಳೆಯುತ್ತವೆ. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಗೊಳ್ಳುತ್ತಿರುವ ಶಿವಾಜಿ ಸುರತ್ಕಲ್ ಚಿತ್ರ ಕೂಡ ಸೇರಿದೆ.ಈವರೆಗೆ ಲವರ್ ಬಾಯ್ ಪಾತ್ರಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದ ನಟ ರಮೇಶ್‍ಅರವಿಂದ್ ಈಗ ಗನ್ ಹಿಡಿದು, ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಪತ್ತೇದಾರಿ ಏಜೆಂಟ್ ಆಗಿ ಅಭಿನಯಿಸಿರುವ ಶಿವಾಜಿ ಸುರತ್ಕಲ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

ಮೊದಲಿಗೆ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಮಾತನಾಡುತ್ತ ದಿ ಕೇಸ್ ಆಫ್ ರಣಗಿರಿ ರಹಸ್ಯ ಎಂಬ ಅಡಿಬರಹ ಶಿವಾಜಿ ಸುರತ್ಕಲ್ ಚಿತ್ರಕ್ಕಿದೆ. ಶಿವಾಜಿಗೆ ಮತ್ತೊಂದು ಪದ ಪವರ್, ಸುರತ್ಕಲ್ ಎಂದರೆ ಮೆದುಳು. ಇವೆರಡೂ ಸೇರಿಕೊಂಡು ಹೇಗೆ ಕೊಲೆಯ ರಹಸ್ಯವನ್ನು ಭೇದಿಸುತ್ತಾರೆ ಎಂಬುದೇ ಶಿವಾಜಿ ಸುರತ್ಕಲ್ ಚಿತ್ರದ ಪ್ರಮುಖ ಕತೆಯಾಗಿದೆ.

ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಚಿತ್ರದ ಇತರೆ ತಾರಾಗಣದಲ್ಲಿ ಸುಕನ್ಯ, ನಿಶಾಂತ್. ಪಿ.ಡಿ. ಸತೀಶ್, ರೋಹಿತ್ ಭಾನುಪ್ರಕಾಶ್, ಧನುಷ್, ಅಮಿತಾ, ಕಿಶೋರ್ ಮುಂತಾದವರು ನಟಿಸಿದ್ದಾರೆ ಎಂದು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.ಇದೇ ಮೊದಲ ಬಾರಿಗೆ ಸಹೋದರಿ ಕೆ.ಎನ್. ರೇಖಾ ಅವರ ಜೊತೆ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರೂ ಎಲ್ಲಿಯೂ ತೊಂದರೆ ಆಗಿಲ್ಲ. ಚಿತ್ರದ ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ನಿರ್ಮಾಪಕರಿಗೆ ಹಲವಾರು ಸಮಸ್ಯೆಗಳುಎದುರಾಗುತ್ತದೆ. ಆದರೆ ನನಗೆ ಆ ರೀತಿ ಯಾವುದೇ ಪ್ರಾಬ್ಲಂ ಆಗಿಲ್ಲ. ಖುಷಿಯಿಂದ ಇದ್ದೇನೆ. ಅದಕ್ಕೆ ರಮೇಶ್ ಅರವಿಂದ್ ಅವರೇ ಕಾರಣ ಎಂದು ನಿರ್ಮಾಪಕ ಅನೂಪ್‍ಗೌಡ ಅವರು ಹೇಳಿದರು.

ಗಂಭೀರವಾಗಿ ಕೊಲೆಗಾರನನ್ನು ಯಾವ ರೀತಿಯಲ್ಲಿ ಕಂಡು ಹಿಡಿಯುತ್ತಾನೆ. ಯಾರೋ ಒಬ್ಬರು ಮಾಡಿದ್ದು, ಅದನ್ನು ಕಂಡು ಹಿಡಿಯುವ ಪಾತ್ರ. ಇದನ್ನೆಲ್ಲಾ ಮಾಡಿಸಿದವರು ಕತೆಗಾರ ಅಭಿಜಿತ್ ಒಂದೇ ರೆಸಾರ್ಟ್‍ದಲ್ಲಿ 35 ದಿನಗಳ ಕಾಲ ಒಂದು ವಿಷಯ, ಚಿತ್ರದ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ನನ್ನ 101ನೇ ಚಿತ್ರದಲ್ಲಿ 100 ವಿವಿಧ ಶಕ್ತಿಗಳು ಕೆಲಸ ಮಾಡಿವೆ. ಹಾಲಿವುಡ್‍ನ ಶೆರ್ಲಾಕ್ ಹೋಂರನ್ನು ನೆನಪಿಸುವ ಪಾತ್ರ ಇದಾಗಿದೆ. ಆತನಿಗೆ ವೈಯಕ್ತಿಕ ಸಮಸ್ಯೆಗಳು ಅನೇಕ ಇದ್ದರೂ ಕೇಸ್‍ನ್ನು ಸುಲಭವಾಗಿ ಬಗೆಹರಿಸುತ್ತಾನೆ ಎಂದು ನಾಯಕ ನಟ ರಮೇಶ್‍ಅರವಿಂದ್ ಅವರು ಹೇಳಿದರು.

ನಾಯಕನ ಪತ್ನಿ ಹಾಗೂ ವಕೀಲೆಯಾಗಿ ನಾಯಕಿ ರಾಧಿಕಾ ನಾರಾಯಣ್, ಸೈಕಿಯಾಟಿಸ್ಟ್ ಆಗಿ ಆರೋಹಿ ನಾರಾಯಣ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.ಈ ಚಿತ್ರಕ್ಕೆ ಛಾಯಾಗ್ರಹಣವನ್ನು ಗುರುಪ್ರಸಾದ್.ಎಂ.ಜಿ. ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ. ಶ್ರೀಕಾಂತ್, ಆಕಾಶ್ ಶ್ರೀವತ್ಸ ಅವರ ಸಂಕಲನವಿದೆ. ಅಭಿಜಿತ್ ಹಾಗೂ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದಿದ್ದು, ಹಾಡುಗಳನ್ನು ಜಯಂತ ಕಾಯ್ಕಿಣಿ ರಚಿಸಿದ್ದಾರೆ. ಬಹಳಷ್ಟು ನಿರೀಕ್ಷೆಯೊಂದಿಗೆ ಬಿಡುಗಡೆಗೊಳ್ಳುತ್ತಿರುವ ಈ ಶಿವಾಜಿಯ ಕಮಾಲ್ ನೋಡಬೇಕು.

Facebook Comments

Sri Raghav

Admin