ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆಗೆ  ಹರಿದು ಬಂದ ಭಕ್ತ ಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.19- ನಡೆದಾಡುವ ದೇವರು ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಪ್ರಥಮ ಪುಣ್ಯ ಸ್ಮರಣೆಗೆ ರಾಜ್ಯದ ಹಾಗೂ ದೇಶದ ನಾನಾ ಭಾಗಗಳಿಂದ ಹರಿದು ಬಂದ ಜನಸಾಗರ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಸ್ಕರಿಸಿ ಧನ್ಯತಾ ಭಾವ ಪಡೆದರು. ಸಿದ್ದಗಂಗಾ ಮಠದ ಪೀಠಾಧಿಪತಿ ಗಳಾದ ಶ್ರೀಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಪುಣ್ಯಸ್ಮರಣೋತ್ಸವ ವೈಭವದಿಂದ ಜರುಗಿತು.

ಬೆಳಗಿನ ಜಾವ 5 ಗಂಟೆಯಿಂದಲೇ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮಠದಲ್ಲಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. 7 ಕಡೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು, ಬೂಂದಿ, ಪಾಯಸದ , ಅನ್ನ ಸಾಂಬಾರ್, ಕೇಸರಿಬಾತ್, ಮೈಸೂರು ಪಾಕ್, ಕೋಸಂಬರಿ, ಮಜ್ಜಿಗೆ, ಬಡಿಸಲಾಯಿತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಜಿ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಮಠಾಧೀಶರು, ಸಾಧು – ಸಂತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಮಖೇಶ್ ಗರ್ಗ್ ಹಾಗೂ ಉಗ್ರ ನಿಗ್ರಹ ದಳದ ಮುಖ್ಯಸ್ಥ ಮಣೀಂದರ್ ಜಿತ್ ಸಿಂಗ್ ಅವರುಗಳನ್ನು ಸನ್ಮಾನಿಸಲಾಯಿತು…

ಇದೇ ಸಂದರ್ಭದಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ… ಸಿದ್ದಲಿಂಗ ಸ್ವಾಮೀಜಿ, ಇಂದು ಮಠದ ಇರುವ 10,000 ವಿದ್ಯಾರ್ಥಿಗಳಿಗೆ ಹೊಸ ಉಡುಪನ್ನು ನೀಡಲಾಗಿದೆ ಹಾಗೂ ಲಿಂಗೈಕ್ಯ ಶ್ರೀಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಎರಡೂವರೆ ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು ಅವರಿಗೆ ಶರ್ಟ್ ಹಾಗೂ ಪಂಚೆಯನ್ನು ವಿತರಿಸಲಾಗಿದೆ. ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡ ಲಾಗಿದೆ. ಪ್ರಾತಃ ಕಾಲ ದಿಂದಲೇ ವಿವಿಧ ಪೂಜ ಕೈಂಕರ್ಯ ನಡೆದವು. ಶ್ರೀಗಳ ಗದ್ದುಗೆ ಮೇಲೆ ಭಕ್ತರೊಬ್ಬರು ನೀಡಿದ್ದ 50 ಕೆಜಿ ಬೆಳ್ಳಿಯ ಪುತ್ಥಳಿ ಪ್ರತಿಷ್ಠಾಪನೆ ಕೂಡ ಆಗಿದೆ ಎಂದರು.

ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಮಾತನಾಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್‍ನಿಂದ ಕಾರ್ಯಸೂಚಿ ಕೈಪಿಡಿ ಮತ್ತು ವೆಬ್‍ಸೈಟ್ ಬಿಡುಗಡೆ ಮಾಡಲಾಗಿದೆ. ಶಿವೈಕ್ಯ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆಗೆ ಭಕ್ತರ ದೇಣಿಗೆ ಸಹ ಅಪಾರವಾಗಿ ಹರಿದು ಬಂದಿದೆ ಎಂದರು. ಗೋಸಲ ಸಿದ್ದೇಶ್ವರರ ಗದ್ದುಗೆ, ಅಟವಿ ಸ್ವಾಮೀಜಿಗಳ ಗದ್ದುಗೆ, ಹಾಗೂ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು ಈ ಅಲಂಕಾರವನ್ನು ನೆರೆದಿದ್ದ ಭಕ್ತರಲ್ಲಿ ಎರಡು ಕಣ್ಣು ಸಾಲದಾಯ್ತು ಇಲ್ಲಿನ ವೈಭವ ಅಲಂಕಾರವನ್ನು. ನೋಡಿ ಭಕ್ತರು ಪುನೀತರಾದರು.

ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಗಳ ಗದ್ದುಗೆಗೆ ವಿಶೇಷ ಅಲಂಕಾರವನ್ನು ಮಾಡಿರು ವುದಲ್ಲದೆ ಹೊರ ಭಾಗದಲ್ಲಿ ಹೂವುಗಳಿಂದ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿದ್ದು ನೆರೆದಿದ್ದ ಭಕ್ತರಲ್ಲಿ ಮನಸೂರೆಗೊಂಡಿತ್ತು. ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ, ಜೆ.ಸಿ.ಮಾಧು ಸ್ವಾಮಿ, ಸಂಸದ ಜಿ.ಎಸ್. ಬಸವರಾಜ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಶಾಸಕ ಜ್ಯೋತಿ ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments