ಮೋದಿ ..ಮೋದಿ… ಅನ್ನೋರಿಗೆ ಹೊಡೀಬೇಕು : ಶಿವಲಿಂಗೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಮಾ.24 : ಮೋದಿ‌…ಮೋದಿ‌ ಅನ್ನೋರಿಗೆ ಹೊಡೆಯಿರಿ …. ಹೀಗೆಂದು ‌ಕರೆ‌ ಕೊಟ್ಟವರೂ ಬೇರೆ ಯಾರೂ ಅಲ್ಲಾ ….ಸ್ವತಃ ‌ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ. ಈ ಒಂದು ಹೇಳಿಕೆ‌ ಹೀಗ ವೈರಲ್ ಆಗಿದೆ.

ಅವರು‌ ಇಂದು ಅರಸೀಕೆರೆ‌ ಪಟ್ಟಣದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಒಂದು‌ ರೀತಿಯ ಪ್ರಚೋದನಕಾರಿ‌ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ‌ ಸ್ಪಷ್ಟ ನೆ ನೀಡಿರುವ ಶಿವಲಿಂಗೆಗೌಡರು ; ಸ್ವಿಸ್ ಬ್ಯಾಂಕ್ ಹಣತಂದು ಎಲ್ಲರ ಖಾತೆಗೆ ಹಣ ಹಾಕ್ತೀವಿ ಎಂದು ಮೋದಿ ಹೇಳಿದ್ದರು, ಯಾರದ್ದಾದರು ಖಾತೆಗೆ 15 ರುಪಾಯಿ‌ ಹಣ ಬಂತಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಯವರು ಚುನಾವಣೆ‌ ಪ್ರಚಾರಕ್ಕೆ ಬಂದಾಗ ನೀವು ಕೇಳ್ಬೇಕು,ಏಯ್ ನಿಲ್ಸಯ್ಯಾ ಎಲ್ಲಯ್ಯಾ ಮೋದಿ‌ ಹೇಳಿದ ದುಡ್ಡು; ಎಲ್ಲಿ ನಿಮ್ಮ ಮೋದಿ ಯಾರ ಖಾತೆಗೆ ಹಣಾ ಹಾಕಿದ್ದಾರೆ ಎಂದು ಪ್ರಶ್ನಿಸಿ ಎಂದು ಕಾರ್ಯಕರ್ತರಿಗೆ ಹೇಳಿರುವುದಾಗಿ‌ ಗೌಡರು‌ ತಮ್ಮ‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶಿವಲಿಂಗೇಗೌಡ ಹೇಳಿಕೆಗೆ ಎಲ್ಲ ಕಡೆಗಳಿಂದ ಟೀಕೆಗಳು ವ್ಯಕ್ತವಾಗಿವೆ. ಬಿಜೆಪಿ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin