ಲಂಡನ್‍ನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ಶಿವಣ್ಣ, ಅಭಿಮಾನಿಗಳಿಗೆ ವಿಡಿಯೋ ಸಂದೇಶ..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜು.12- ಹ್ಯಾಟ್ರಿಕ್ ಹೀರೋ, ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಅವರು ತಮ್ಮ 57ನೆ ಹುಟ್ಟುಹಬ್ಬವನ್ನು ಲಂಡನ್‍ನಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ. ಲಂಡನ್‍ನಲ್ಲಿ ಶಿವರಾಜ್‍ಕುಮಾರ್‍ರ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಪತ್ನಿ ಗೀತಾ ಹಾಗೂ ಸಹೋದರ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರು ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪ್ರತಿ ವರ್ಷ ಶಿವರಾಜ್‍ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರೂ ಆದರೆ ಈ ಬಾರಿ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದು ಅಲ್ಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ಶಿವಣ್ಣನಿಗೆ ಬಲಭುಜದ ಆಪರೇಷನ್ ಯಶಸ್ವಿಯಾಗಿ ನಡೆದಿದ್ದು, ತಮ್ಮ ಅಭಿಮಾನಿಗಳಿಗೆ ಅವರು ಸಂದೇಶ ಕಳಿಸಿದ್ದಾರೆ. ಕ

ಕಳೆದ ಕೆಲವು ದಿನಗಳ ಹಿಂದೆ ನಾನು ಲಂಡನ್‍ನಲ್ಲಿ ವಾಕ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಬಿದ್ದು ನನ್ನ ಬಲಭುಜಕ್ಕೆ ಗಾಯವಾಗಿತ್ತು, ಅದನ್ನು ಲೆಕ್ಕಿಸದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಿಂದ ನೋವು ಹೆಚ್ಚಾಗಿದ್ದರಿಂದ ಈಗ ಅದರ ಶಸ್ತ್ರ ಚಿಕಿತ್ಸೆ ಆಗಿದ್ದು ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸೂಪರ್‍ಸ್ಟಾರ್ ರಜನಿಕಾಂತ್ ಅವರಿಗೆ ಆಪರೇಷನ್ ಮಾಡಿದ ಲಂಡನ್ ವೈದ್ಯರೇ ನನಗೂ 45 ನಿಮಿಷಗಳ ಕಾಲ ಆಪರೇಷನ್ ಮಾಡಿದ್ದಾರೆ ಇನ್ನೊಂದು ತಿಂಗಳು ರೆಸ್ಟ್ ಮತ್ತು 2 ತಿಂಗಳು ರಿಸ್ಕ್ ತೆಗೆದುಕೊಂಡು ಸ್ಟಂಟ್ ಮಾಡುವ ಆಗಿಲ್ಲ ಅದಾದ ನಂತರ ಎಂದಿನಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಈ ಬಾರಿ ಲಂಡನ್‍ನಲ್ಲಿರುವ ಕಾರಣ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿದ್ದರೂ ಮುಂದಿನ ವರ್ಷ ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತೇನೆ ಎಂದು ಹೇಳಿದರು.  ತಮ್ಮ ನೆಚ್ಚಿನ ನಟ ಶೀಘ್ರ ಗುಣಮುಖರಾಗಲೆಂದು ಆಶಿಸಿ ಅಭಿಮಾನಿಗಳು ಪೂಜೆ, ಹೋಮ, ಹವನ ನಡೆಸಿದ್ದಾರೆ.

# ಅಯುಷ್ಮಾನ್‍ಭವ ಆದ ಆನಂದ್:
ದ್ವಾರಕೀಶ್ ನಿರ್ಮಾಣದಲ್ಲಿ ವಾಸು ನಿರ್ದೇಶನದಲ್ಲಿ ಶಿವರಾಜ್‍ಕುಮಾರ್ ನಟಿಸಿರುವ ಆನಂದ್ ಚಿತ್ರಕ್ಕೆ ಈಗ ಆಯುಷ್ಮಾನ್‍ಭವ ಎಂಬ ಟೈಟಲ್ ಇಡಲಾಗಿದೆ ಎಂದು ಚಿತ್ರತಂಡವು ಶಿವಣ್ಣನ ಹುಟ್ಟುಹಬ್ಬದಂದು ಘೋಷಿಸಿದ್ದಾರೆ.

ಆಯುಷ್ಮಾನ್‍ಭವ ಚಿತ್ರದಲ್ಲಿ ಶಿವಣ್ಣನೊಂದಿಗೆ ರಚಿತಾರಾಮ್ ನಟಿಸುತ್ತಿದ್ದು, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗುರುಕಿರಣ್ ಅವರ ಸಂಗೀತವಿದೆ. ಹರ್ಷ ನಿರ್ದೇಶಿಸಿ ಶಿವರಾಜ್‍ಕುಮಾರ್ ನಟಿಸಲಿರುವ ಭಜರಂಗಿ 2 ಚಿತ್ರದ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಯಿತು. ಸ್ಯಾಂಡಲ್‍ವುಡ್‍ನ ಕಲಾವಿದರು, ತಂತ್ರಜ್ಞರು ಶಿವರಾಜ್‍ಕುಮಾರ್ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

Facebook Comments

Sri Raghav

Admin