ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗೆ ಅಕ್ರಮ ಸಕ್ರಮ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ 2014-18ನೇ ಅವಧಿಯಲ್ಲಿ ಕಟ್ಟಿದ್ದ ನಿವೇಶನಗಳಿಗೆ ಅಕ್ರಮ- ಸಕ್ರಮ ಭಾಗ್ಯ ದೊರೆತಿದೆ. ನಗರದಲ್ಲಿಂದು ಬಿಡಿಎ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್, ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಸ್ವಾೀಧಿನಕ್ಕೂ ಮುನ್ನ ಮನೆ ಕಟ್ಟಿದ್ದ ನಿವೇಶನದಾರರಿಗೆ ನಾಲ್ಕು ವಾರದಲ್ಲಿ ಸಕ್ರಮ ಪತ್ರ ನೀಡುವಂತೆ ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ ಎಂದರು.

ಡಾ.ಶಿವರಾಮ ಕಾರಂತ ಲೇಔಟ್ ಭೂಸ್ವಾೀಧಿನ ಅಧಿಸೂಚನೆ ಸಂಬಂಧ ಬಿಡಿಎಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಇನ್ನು ಇಲ್ಲಿವರೆಗೆ 6000 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ 5700 ಅರ್ಜಿಗಳು ಬಾಕಿ ಇವೆ. ಸದ್ಯ ಮೊದಲ ಹಂತದಲ್ಲಿ 300 ಮನೆಗಳಿಗೆ ಸಕ್ರಮಗೊಳಿಸಲು ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

#ಏನಿದು ಪ್ರಕರಣ..?:

ಸದ್ಯ ಬಡ, ಮಧ್ಯಮ ವರ್ಗದ ಆಸೆ ಕಮರದಂತೆ ಉತ್ತಮ ತೀರ್ಪು ಮೊದಲ ಹಂತದಲ್ಲಿ ಬಂದಿದೆ.ಆದರೆ, ಈ ಮೊದಲು ಡಾ.ಶಿವರಾಮ ಕಾರಂತ ಲೇಔಟ್ ವಿಚಾರ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಿರ್ದೇಶನದ ಮೇರೆಗೆ 2018ರಲ್ಲಿ ಮತ್ತೆ ಅಧಿಸೂಚನೆ ಹೊರಡಿಸಲಾಗಿತ್ತು.

ಅಷ್ಟರಲ್ಲಾಗಲೇ ಜಾಗದಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ನಿವೇಶನಗಳು ನಿರ್ಮಾಣ ಮಾಡಲಾಗಿತ್ತು. ಕಾನೂನು ಬದ್ಧವಾಗಿ ಅನುಮತಿ ಪಡೆದು ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ನಿರ್ಧಾರವಾಗಿದೆ. ಇದರ ವರದಿ ಕೊಡಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ ಸಮಿತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು.

ಅನುಮತಿ ಹಾಗೂ ಅನುಮತಿ ಇಲ್ಲದೆ ಕಟ್ಟಿರುವ ಕಟ್ಟಡಗಳ ವರದಿ ಕೊಡುವಂತೆ ಸಮಿತಿಗೆ ಸೂಚನೆ ಕೊಟ್ಟಿತ್ತು. ಶಿವರಾಮ ಕಾರಂತ ಲೇಔಟ್‍ನಲ್ಲಿ 13 ಲೇಔಟ್ ಹಾಗೂ ಎರಡು ಹಳ್ಳಿಗಳಿದ್ದು, ಇದನ್ನ ಭೂ ಸ್ವಾೀನದಿಂದ ಕೈ ಬಿಡುವಂತೆ ತಿಳಿಸಲಾಗಿತ್ತು.

ಸ್ಥಳೀಯ ಪಂಚಾಯತಿ, ಬಿಬಿಎಂಪಿ ಮೂಲಕ ಕಟ್ಟಿರುವ ಮನೆಗಳು ಸಹ ಸೇರಿದ್ದವು. ಇದೀಗ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ವರದಿಯಲ್ಲಿ ಮೊದಲ ಹಂತದಲ್ಲಿ 300 ಕಟ್ಟಡಗಳ ಅಕ್ರಮ ಸಕ್ರಮಕ್ಕೆ ಅನುಮತಿ ನೀಡಿದೆ.

Facebook Comments