ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟಿದ್ದೇ ಡಿಕೆಶಿಗೆ ಮುಳುವಾಯಿತು : ಶಿವರಾಮೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.11- ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟಿದ್ದನ್ನೇ ನೆಪ ಮಾಡಿ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಕಿರುಕುಳ ನೀಡುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಫ್ರೀಡಂಪಾರ್ಕ್‍ವರೆಗಿನ ಪಾದಯಾತ್ರೆಗೂ ಮುನ್ನ ಜಮಾವಣೆಗೊಂಡಿದ್ದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮಾತನಾಡಿದ ಅವರು, ಪ್ರಭಾವಿ ನಾಯಕನನ್ನು ಬಗ್ಗು ಬಡಿಯಬೇಕೆಂದು ಈ ರೀತಿ ಮಾಡಲಾಗುತ್ತಿದೆ ಎಂದು ದೂರಿದರು.

ಹತ್ತಾರು ಜನರ ವಿರುದ್ದ ಕೇಸ್ ಆಗಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಆದರೆ ಡಿ.ಕೆ.ಶಿವಕುಮಾರ್ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದ್ದಾರೆ. ಇವರ ವಿರುದ್ದ ಮಾತ್ರ ಇಡಿ ಸ್ವಯಂಪ್ರೇರಣೆ ಯಿಂದ ದೂರು ದಾಖಲಿಸಿದೆ ಎಂದರು.  ಶಾಸಕ ಶ್ರೀನಿವಾಸಗೌಡರು ಬಿಜೆಪಿಯವರು ತಮಗೆ 5 ಕೋಟಿ ಕೊಡಲು ಬಂದಿದ್ದರು ಎಂದು ಆರೋಪಿಸಿದ್ದರೂ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕ ರಾಜುಗೌಡ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ನೆರೆ ಸಂತ್ರಸ್ತರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಲ್ಲ. ಆದರೆ ಪ್ರತಿಪಕ್ಷದವರನ್ನು ದಮನ ಮಾಡುವ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು. ಜನ ಬೆಂಬಲವಿದ್ದ ಮೈತ್ರಿ ಸರ್ಕಾರವನ್ನು ಬೀಳಿಸಿದರು. ಈಗ ಐಟಿ, ಇಡಿ ಮೂಲಕ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಹೇಳಿದರು.

Facebook Comments