ಬಿಬಿಎಂಪಿ ಬಿಜೆಪಿ ಸದಸ್ಯ ಜೈಪಾಲ್ ಅವರ ಸಹಾಯಕ ಕೊರೋನಾಗೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, 29 : ಪಾಲಿಕೆ ಸದಸ್ಯ ಜೈಪಾಲ್ ಅವರ ಆಪ್ತ ಸಹಾಯಕ ಶಿವರುದ್ರಯ್ಯ ಅವರು ಅಕಾಲಿಕ ನಿಧನ ಹೊಂದಿದ್ದಾರೆ. ಯಶವಂತಪುರದಲ್ಲಿ ವಾಸವಾಗಿದ್ದ ಶಿವರುದ್ರಯ್ಯ (51) ಅವರು ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಯಶವಂತಪುರ ಪಾಲಿಕೆ ಸದಸ್ಯ ಜೈಪಾಲ್ ಅವರ ಬಳಿ ಸುದೀರ್ಘ ಸಂಪರ್ಕವಿಟ್ಟುಕೊಂಡು ಆಪ್ತ ಸಹಾಯಕರಾಗಿ ಕಾರ್ಯವ್ಯವಸ್ಥೆಯ ಶಿವರುದ್ರಯ್ಯ ಅವರು ಇಡೀ ಕ್ಷೇತ್ರದಲ್ಲಿ ಚಿರಪರಿಚಿತರು ಮತ್ತು ಎಲ್ಲರಿಗೂ ಆತ್ಮೀಯರಾಗಿದ್ದರು.

ದಕ್ಷತೆ ಹಾಗೂ ಪ್ರಾಮಾಣಿಕತೆಯಲ್ಲಿ ಹೆಸರು ಮಾಡಿದ್ದ ಶಿವರುದ್ರಯ್ಯ ಅವರು ಲಾಕ್ ಡಾನ್ ಹಾಗೂ ಕೋವಿಲ್ ಸಮಸ್ಯೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸ್ಪಂದಿಸುವಂತಹ ನಿಸ್ವಾರ್ಥ ಸೇವೆಯನ್ನು ಅವರು ಮಾಡುತ್ತಿದ್ದರೂ ಯಾವುದೇ ಕಳಂಕವಿಲ್ಲದೆ ಪಾರದರ್ಶಕವಾಗಿ ಜನರಿಗೆ ತಲುಪಬೇಕಾಗಿದ್ದ ಸವಲತ್ತುಗಳನ್ನು ಕೊಡಿಸುತ್ತಿದ್ದರು.

ಅವರ ಪ್ರಾಮಾಣಿಕತೆಗೆ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ಇಂದು ಅವರ ಸ್ವಗ್ರಾಮವಾದ ದೊಡ್ಡಬಳ್ಳಾಪುರದಲ್ಲಿ ಅಂತ್ಯಸಂಸ್ಕಾರ ನಡೆದಿದ್ದು ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಸೇರಿದಂತೆ ಅನೇಕ ಗಣ್ಯರು ಶಿವರುದ್ರಯ್ಯ ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Facebook Comments

Sri Raghav

Admin