ಬಿಜೆಪಿ ದುರಹಂಕಾರವೇ ಪಶ್ಚಿಮ ಬಂಗಾಳದಲ್ಲಿ ಸೋಲಿಗೆ ಕಾರಣ : ಶಿವಸೇನೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಮೇ 4-ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲು ಆ ಪಕ್ಷದ ದುರಂಹಕಾರ ಧೋರಣೆಯೇ ಕಾರಣ ಎಂದು ಶಿವಸೇನೆ ಆರೋಪಿಸಿದೆ.ಮಹಾರಾಷ್ಟ್ರದಲ್ಲೂ ಆ ಪಕ್ಷದ ಈ ಧೋರಣೆಯಿಂದಲೆ ಬಿಜೆಪಿ ಅಧಿಕಾರದಿಂದ ದೂರ ಉಳಿಯಲು ಕಾರಣವಾಯಿತು ಎಂದು ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕಿಯದಲ್ಲಿ ಬರೆಯಲಾಗಿದೆ.

ಕೇಸರಿ ಪಕ್ಷದ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ನಿಗಾ ಇರಲಿ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಎನ್‍ಸಿಪಿ ಸಚಿವ ಚಗನ್ ಭುಜಬಲ್ ವಿರುದ್ಧ ಹರಿಹಾಯ್ದಿರುವ ಬೆನ್ನಲ್ಲೆ ಶಿವಸೇನೆ ಈ ರೀತಿ ಪ್ರತಿಕ್ರಿಯಿಸಿದೆ.

ಒಂದು ಕಾಲದಲ್ಲಿ ಬಿಜೆಪಿಯ ಪರಮಾಪ್ತ ಪಕ್ಷವಾಗಿದ್ದ ಶಿವಸೇನೆ 2019 ರ ಚುನಾವಣೆ ನಂತರ ಮುಖ್ಯಮಂತ್ರಿ ಸ್ಥಾನ ಪಡೆಯಲು ಪೈಪೆÇೀಟಿಗೆ ಬಿದ್ದ ಹಿನ್ನೆಲಯಲ್ಲಿ ಸೇನೆ ಬಿಜೆಪಿ ಮೈತ್ರಿ ತೊರೆದು ಎನ್‍ಸಿಪಿ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದ ನಂತರ ಉಭಯ ಪಕ್ಷಗಳ ನಡುವಿನ ಬಿರುಕು ಹೆಚ್ಚಾಗಿದೆ.

Facebook Comments

Sri Raghav

Admin