ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ, ನಿಂದನೆ ನಡೆದರೆ ಕಠಿಣ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.12- ಕರ್ತವ್ಯ ನಿರತ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ, ನಿಂದನೆಯಂತಹ ಪ್ರಕರಣ ನಡೆದರೆ ಗಂಭೀರವಾಗಿ ಪರಿಗಣಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದ್ದಾರೆ. ಕರ್ತವ್ಯನಿರತ ನೌಕರರೊಂದಿಗೆ ಸಹ ನೌಕರರು ಅಮಾನವೀಯವಾಗಿ ನಡೆದುಕೊಳ್ಳಬಾರದು. ಅವಾಚ್ಯ ಶಬ್ದಗಳಿಂದ ಮಾತನಾಡಿ ಹಲ್ಲೆ ನಡೆಸುವುದು ಮುಂತಾದ ಘಟನೆಗಳು ನಡೆದ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಲು ಸೂಚಿಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‍ಗಳು ಜನರ ಜೀವನಾಡಿಯಾಗಿದ್ದು, ಸಾರಿಗೆ ನೌಕರರು ನಿಗಮದ ಬೆನ್ನೆಲುಬು. ಹಾಗಾಗಿ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಅಕ್ಷರಶಃ ತೊಂದರೆಯಾಗುತ್ತದೆ. ಮುಷ್ಕರಕ್ಕೆ ಪ್ರಚೋದನೆ ನೀಡಿದರೂ ಕರ್ತವ್ಯ ನಿರ್ವಹಿಸುವಾಗ ಸಹ ಸಿಬ್ಬಂದಿಗಳಿಂದ ಜೀವ ಬೆದರಿಕೆ ಇದ್ದಾಗಲೂ ಬಸ್‍ಗಳನ್ನು ಓಡಿಸಿರುವ ಸಿಬ್ಬಂದಿಗಳಿದ್ದಾರೆ.

ಎಲ್ಲ ರೀತಿಯಲ್ಲೂ ಅಡಚಣೆ ಮಾಡಿದರೂ ಎದೆಗುಂದದೆ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಬದ್ಧತೆ ತೋರುತ್ತಿರುವ ನೌಕರರು ಮತ್ತು ಅಧಿಕಾರಿಗಳಿಗೆ ಘಟಕ ಅಥವಾ ಬಸ್ ನಿಲ್ದಾಣಗಳ ಬಳಿ ಕೆಲ ನೌಕರರು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ನಡೆಸುವುದು ವರದಿಯಾಗಿದೆ.

ಈಗಾಗಲೇ ಒಬ್ಬರಿಗೆ ವಿಷ ಕುಡಿಸಿದ್ದೇವೆ. ಇನ್ನು 10 ಜನರಿಗೆ ವಿಷ ಕುಡಿಸಿ ನಾಟಕವಾಡಲು ತಯಾರಿ ಮಾಡಿದ್ದೇವೆ ಎಂದು ಹೇಳುತ್ತಿರುವುದು ನಿಜಕ್ಕೂ ಆಘಾತಕಾರಿ. ಯಾವುದೇ ನೌಕರರು ತಮ್ಮ ಸಹನೌಕರರೊಂದಿಗೆ ಇಷ್ಟೊಂದು ಅಮಾನವೀಯವಾಗಿ ನಡೆದುಕೊಳ್ಳಬಾರದು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನೌಕರರ ಮೇಲೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಕಾನೂನಾತ್ಮಕವಾಗಿ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆಗೆ ಮುಂದಾಗಿರುವುದರಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹೆದರುವ ಅಗತ್ಯವಿಲ್ಲ ಎಂದು ಸಾರ್ವಜನಿಕರು ಸ್ಪಷ್ಟಪಡಿಸಿದ್ದಾರೆ.

Facebook Comments