ಟೋಕಿಯೋ ಒಲಂಪಿಕ್ಸ್‌ಗೆ ಅರ್ಹತೆ ಪಡೆದ ಜಾವೆಲಿನ್‍ ಪಟು ಶಿವಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಪೊಟ್‍ಚೆಫ್‍ಸ್ಟ್ರೂಮ್(ದಕ್ಷಿಣ ಆಫ್ರಿಕಾ), ಮಾ.11- ಭಾರತದ ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಶಿವಪಾಲ್ ಇದೇ ಮೊದಲ ಬಾರಿಗೆ ಒಲಂಪಿಕ್‍ನಲ್ಲಿ ಸೆಣಸಲಿದ್ದಾರೆ.

ಶಿವಪಾಲ್ ಸಿಂಗ್ ಟೋಕಿಯೋ ಒಲಂಪಿಕ್-2020ಗೆ ಅರ್ಹತೆ ಪಡೆದ ಎರಡನೇ ಜಾವೆಲಿನ್ ಪಟು. ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಈಗಾಗಲೇ ಈ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದ ಪೊಟ್‍ಚೆಫ್‍ಸ್ಟ್ರೂಮ್‍ನ ಮ್ಯಾಕ್ ಅರ್ಥರ್ ಸ್ಟ್ರೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ಎಸಿಎನ್‍ಡಬ್ಲ್ಯು ಕ್ರೀಡಾಕೂಟದ ಭರ್ಜಿ ಎಸೆತ ಪಂದ್ಯದಲ್ಲಿ 24 ವರ್ಷದ ಶಿವಪಾಲ್ ಸಿಂಗ್ ಐದನೇ ಪ್ರಯತ್ನದಲ್ಲಿ 85.47 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು.

ಒಲಂಪಿಕ್‍ಗೆ ಅರ್ಹತೆ ಪಡೆಯಲು 85 ಮೀಟರ್ ಎಸೆತದ ಮಾನದಂಡ ನಿಗದಿಗೊಳಿಸಲಾಗಿತ್ತು. ಅದಕ್ಕಿಂತ 0.47 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಸಿಂಗ್ ಟೋಕಿಯೋ ಒಲಂಪಿಕ್ ಟಿಕೆಟ್ ಗಿಟ್ಟಿಸಿದ್ದಾರೆ.  ಭಾರತದ ಮತ್ತೊಬ್ಬ ಜಾವೆಲಿನ್ ಎಸೆತಗಾರ ಅ?ïದೀಪ್ ಸಿಂಗ್ ಕಂಚು ಪದಕ ಗೆದ್ದಿದ್ದಾರೆ(75 ಮೀಟರ್‍ಗಳು).

Facebook Comments