ಸೋನಾಲಿ ಅಪಹರಣ ವಿವಾಹ ಹೇಳಿಕೆ ವದಂತಿ ಸುಳ್ಳು : ಶೋಹೆಬ್ ಅಖ್ತರ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜೂ.20- ಸೋನಾಲಿ ಬೇಂದ್ರೆ ಅವರನ್ನು ಅಪಹರಿಸಿ ಮದುವೆಯಾಗ ಬಯಸುತ್ತೇನೆ ಎಂಬ ವದಂತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ, ವೇಗದ ಬೌಲರ್ ಶೋಹೆಬ್ ಅಕ್ತರ್, ಇದೆಲ್ಲಾ ಅಧಾರರಹಿತವಾಗಿದೆ ಎಂದಿದ್ದಾರೆ.

ಯೂಟೂಬ್‍ನಲ್ಲಿ ಸುದೀರ್ಘ ವಿಡಿಯೋವೊಂದನ್ನು ಬಿಟ್ಟಿರುವ ಶೋಹೆಬ್, ಸೋನಾಲಿಯ ಅವರನ್ನು ಅಪಹರಿಸಿ ಮದುವೆಯಾಗಬೇಕೆಂದು ವರದಿಯಾಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಮಾಜಿ ವೇಗ ಬೌಲರ್, ನಟಿ ಸೋನಾಲಿ ಅವರೊಂದಿಗೆ ಗೀಳು ಹೊಂದಿದ್ದಾರೆ ಮತ್ತು ಅವರ ಫೋಟೋವನ್ನು ಎಚ್‍ಎಸ್ ವ್ಯಾಲೆಟ್ನಲ್ಲಿ ಹಾಕಿದ್ದಾರೆಂದು ಎಂದು ಹೇಳಲಾಗುತ್ತಿರುವ ವರದಿಗಳನ್ನು ತಳ್ಳಿಹಾಕಿದ್ದಾರೆ. ನಾನು ಸೋನಾಲಿ ಬೇಂದ್ರೆ ಅವರ ಅಭಿಮಾನಿಯೇ ಅಲ್ಲ. ಅಭಿನಯದಲ್ಲಿ ಅವರ ತೊಡಗುಕೊಳ್ಳುವಿಕೆಯ ಬಗ್ಗೆ ಗಮನಿಸಿದ್ದೇನೆ.

ಕ್ಯಾನ್ಸರ್ ಹೋರಾಟದಲ್ಲಿ ಅವರ ಸೆಣಸಾಡಿದ್ದು, ಜಗತ್ತಿಗೆ ಅವರು ಆದರ್ಶಪ್ರಾಯವಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.  ಶೋಹೆಬ್ ಅಖ್ತರ್ ಕ್ರಿಕೆಟ್ ನಿವೃತ್ತಿ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಿದ್ದಾರೆ ಮತ್ತು ಕ್ರಿಕೆಟ್ ಸಂಬಂಧಿಸಿದ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

ಇಂಡಿಯಾ ವರ್ಸಸ್ ಪಾಕಿಸ್ತಾನ ಪಂದ್ಯದ ಬಗ್ಗೆಯೂ ಅಖ್ತರ್ ಮಾತನಾಡಿದ್ದು, 89 ರನ್‍ಗಳಿಂದ ಸೋಲನುಭವಿಸಿದ ತನ್ನ ದೇಶದ ಆಟಗಾರರ ಕೆಟ್ಟ ಪ್ರದರ್ಶನಕ್ಕೆ ವಾಗ್ದಾಳಿ ನಡೆಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ