ವೋಟ್ ಬ್ಯಾಂಕ್‍ಗಾಗಿ ರಾಷ್ಟ್ರೀಯ ಪೌರತ್ವ ವಿರೋಧಿಸುತ್ತಿರುವ ವಿಪಕ್ಷಗಳು: ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಂಗಳೂರು, ಜ.18- ವೋಟ್ ಬ್ಯಾಂಕಿಗಾಗಿ ರಾಷ್ಟ್ರೀಯ ಪೌರತ್ವ ತಿದ್ದುಪಡಿಯನ್ನು ವಿರೋಧಿಸುವ ಮೂಲಕ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲುಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ರಾಷ್ಟ್ರ ಜಾಗರಣ ಸಮಿತಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌರತ್ವ ಕುರಿತು ಜನ ಜಾಗೃತಿ ಜಾಥಾದಲ್ಲಿ ಮಾತನಾಡಿ ಸಿಎ ಕುರಿತಾದ ಜಾಗೃತಿ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ಪಾಲ್ಗೊಳ್ಳುವ ಅಗತ್ಯ ಇದೆ ವಿರೋಧಪಕ್ಷಗಳು ಮತ ಬ್ಯಾಂಕ್ ರಾಜಕೀಯಕ್ಕಾಗಿ ಈ ಕಾಯ್ದೆ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದೆ. ಜನರಲ್ಲಿ ಆತಂಕ ಭಯ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಪೌರತ್ವ ಕುರಿತು ಇಂದಿರಾಗಾಂಧಿ ಮಾತನಾಡಿದ್ದರು. ನೆಹರು ಆಡಳಿತದಲ್ಲಿ ಚರ್ಚೆಯಾಗಿತ್ತು. ಪ್ರಾಣಭಿಕ್ಷೆ ಬೇಡಿ ಭಾರತಕ್ಕೆ ಬಂದವರಿಗೆ ರಕ್ಷಣೆ ಕೊಡಬೇಕೆಂದು ಮಹಾತ್ಮ ಗಾಂಧಿ ಹೇಳಿದ್ದರು. ಆದರೆ ಮೋದಿ ಆಡಳಿತದಲ್ಲಿ ವಿರೋಧಕ್ಕಾಗಿ ವಿರೋಧ ಮಾಡಲಾಗುತ್ತಿದೆ ಎಂದರು.  ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಬಿಜೆಪಿ ಮುಖಂಡ ಪ್ರೇಮಕುಮಾರ, ಕೋಟೆ ರಂಗನಾಥ, ಜಾಗರಣ ಸಮಿತಿಯ ರವೀಂದ್ರ ಬೆಳವಾಡಿ ಮೊದಲಾದವರಿದ್ದರು.

Facebook Comments