ಕೇಂದ್ರೀಯ ವಿದ್ಯಾಲಯಕ್ಕೆ ಅಗತ್ಯ ಭೂಮಿ ನೀಡಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು,ಫೆ.10- ಕೇಂದ್ರೀಯ ವಿದ್ಯಾಲಯದ ಕಟ್ಟಡಕ್ಕೆ ಅಗತ್ಯ ಭೂಮಿ ಮಂಜೂರು ಮಾಡುವಂತೆ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಪೋಷಕರು ಮನವಿ ಸಲ್ಲಿಸಿದರು. 2017 -18 ರಲ್ಲಿ ಡಯಟ್ ಆವರಣದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭವಾಗಿದ್ದು ಸ್ವಂತ ಕಟ್ಟಡ ಇಲ್ಲದಿರುವುದರಿಂದ ಮೂಲಸೌಲಭ್ಯ ಇಲ್ಲವಾಗಿದೆ.

ಸಂಸದರು ಈ ಬಗ್ಗೆ ಗಮನಹರಿಸಬೇಕು ಎಂದು ಪೋಷಕರು ಒತ್ತಾಯಿಸಿದರು. ತಾಲೂಕಿನ ಕದ್ರಿಬಿದ್ರಿ ಬಳಿ 10 ಎಕರೆ ಜಾಗ ಮಂಜೂರು ಮಾಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ನೆರವೇರಿಸಲಾಗಿತ್ತು. ಆದರೆ ಈ ಜಾಗ ಡ್ರೀಮ್ ಅರಣ್ಯ ಪ್ರದೇಶವೆಂದು ತಿಳಿಸಿದ್ದರಿಂದ 27.50 ಕೋಟಿ ರೂ. ಹಣವಿದ್ದರೂ ಕಟ್ಟಡ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಪೋಷಕರು ದೂರಿದರು.

ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿ ಆರಂಭಿಸಬೇಕಾಗಿದೆ, ಅಗತ್ಯ ಮೂಲಸೌಲಭ್ಯ ಇಲ್ಲವಾಗಿದೆ ಇದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ, ಕೂಡಲೇ ಜಮೀನು ಗುರುತಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

Facebook Comments