ವಾಜಪೇಯಿ ವಿರೋಧ ಪಕ್ಷದ ನಾಯಕರೂ ಹೊಗಳುವಂತಹ ನಾಯಕ : ಶೋಭಾ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಡಿ.25- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರುವಾಗಿದ್ದರು. ವಿರೋಧ ಪಕ್ಷದ ನಾಯಕರೂ ಹೊಗಳುವಂತಹ ನಾಯಕರಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.  ಜಿಲ್ಲೆಯಲ್ಲಿ ನಡೆದ ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮ ದ ಲ್ಲಿ ಭಾವಹಿಸಿ ಮಾತನಾಡಿದ ಅವರು, ಕೃಷಿ ವಿಧೇಯಕದ ಬಗ್ಗೆ ಹೋರಾಟಗಳು ನಡೆಯುತ್ತಿವೆ.

ಕಳೆದ 20 ವರ್ಷಗಳಿಂದ ಈ ವಿಧೇಯಕ ಮಂಡಿಸಲು ಯತ್ನ ನಡೆದಿದ್ದರೂ ಸಾಧ್ಯವಾಗಿರಲಿಲ್ಲ. ಆದರೆ ನಮ್ಮ ಸರ್ಕಾರ ಅದನ್ನು ಮಾಡಿದೆ ಎಂದರು.

ಕಾಂಗ್ರೆಸ್ 2013 ಹಾಗೂ 19ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಧೇಯಕವನ್ನು ಮಂಡಿಸೋ ಪ್ರಸ್ತಾಪ ಮಾಡಿತ್ತು. ದಲ್ಲಾಳಿಗಳ ಹಾವಳಿ ತಡೆಯೋದಾಗಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ತಮಿಳುನಾಡಿನಲ್ಲಿ ಡಿಎಂಕೆ ಎಪಿಎಂಸಿ ಕಾಯಿದೆ ರದ್ದುಮಾಡೋದಾಗಿ ಹೇಳಿತ್ತು ಎಂದು ಹೇಳಿದರು.

ಯಾರೆಲ್ಲಾ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಅವರು ಡೋಂಗಿ ಹಾಗೂ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಕಮ್ಯುನಿಸ್ಟ್ ರು ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ, ಆದರೆ ಅವರು ಆಡಳಿತ ಮಾಡೋ ರಾಜ್ಯದಲ್ಲಿ ಎಪಿಎಂಸಿ ಇಲ್ಲ. ಇವರೆಲ್ಲಾ ಡೋಂಗಿತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೃಷಿ ವಿಧೇಯಕ ವಿರೋಧ ಕೇವಲ ರಾಜಕೀಯ ಪಿತೂರಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ವಿರೋಧಿಸಬೇಕೆಂಬ ಉದ್ದೇಶದಿಂದ ವಿರೋಧ ಮಾಡಲಾಗುತ್ತಿದೆ. ರ್ನಾಟಕದಲ್ಲಿಯೂ ರೈತರ ಹೋರಾಟ ನಡೆಯುತ್ತೆ ಆದರೆ ಆ ಹೋರಾಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಾರೆ. ನಮ್ಮ ರೈತರ ಹೋರಾಟ ಬೆಂಬಲಿಸಿ ಕೆನಡಾ ಪ್ರಧಾನಿ ಮಾತನಾಡುತ್ತಾರೆ ಎಂದು ಹೇಳಿದರು.

ಅಲ್ಲಿನ ಸಂಸತ್‍ನಲ್ಲಿ ಸುಮಾರು 18 ಜನ ಸಿಖ್ ಹಿನ್ನೆಲೆಯವರು ಗೆದ್ದಿದ್ದಾರೆ. ಬಿಂದ್ರನ್ ವಾಲೆ ಹತ್ಯೆ ನಂತರ ಬಹಳ ದೊಡ್ಡ ಸಂಖ್ಯೆಯಲ್ಲಿ ಸಿಖ್ ರು ಕೆನಡಾ ದಲ್ಲಿ ನೆಲೆಸಿದ್ದಾರೆ. ಖಲಿಸ್ತಾನ್ ಹೋರಾಟವನ್ನು ಅಲ್ಲಿ ಜೀವಂತವಾಗಿಡಲು ಯತ್ನ ನಡೆದಿದೆ. ರೈತ ಹೋರಾಟದ ಹಿಂದೆ ಖಲಿಸ್ತಾನ ಹೋರಾಟ ಸಂಪರ್ಕ ಇದೆ ಎಂದು ಶೋಭಾ ಕರಂದ್ಲಾಜೆ ಪರೋಕ್ಷ ಆರೋಪ ಮಾಡಿದರು.

2023ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿ ಮೋದಿಯವರ ಕನಸು. ಅವರು ಕಡಿಮೆ ಆದಾಯದಲ್ಲಿ ಹೆಚ್ಚು ಲಾಭ ಗಳಿಸುವಂತೆ ಆಗಬೇಕು. ರೈತರ ಏಳಿಗೆಗೆ ಈ ಕಾಯಿದೆಗಳ ಉದ್ದೇಶ. ಎಂಎಸ್ ಪಿ ಹಾಗೂ ಎಪಿಎಂಸಿ ಯಾವುದೇ ಕಾರಣದಿಂದ ರದ್ದಾಗೋದಿಲ್ಲ. ಈ ವಿಧೇಯಕವನ್ನು ರೈತರು ಅರ್ಥಮಾಡಿಕೊಳ್ಳಬೇಕು ಎಂದು ಕರಂದ್ಲಾಜೆ ಹೇಳಿದರು.

Facebook Comments