ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿ ದೇವಿಗೆ ಸ್ಪೆಷಲ್ ಪೂಜೆ ಸಲ್ಲಿಸಿದ ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.17- ಕೊನೆ ಆಷಾಢ ಶುಕ್ರವಾರವಾದ ಇಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ತುಂತು ಮಳೆಯ ನಡುವೆಯೇ ಬರಿ ಕಾಲಿನಲ್ಲಿ ಹತ್ತಿ ಬೆಟ್ಟಕ್ಕೆ ತೆರಳಿದ ಅವರು 1001 ಮೆಟ್ಟಿಲುಗಳನ್ನು ಹತ್ತಿ ಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಆದರೆ ಇಂದು ಶೋಭಾ ಕರಂದ್ಲಾಜೆ ಅವರೊಂದಿಗೆ ಬಿಜೆಪಿಯ ಯಾವುದೇ ಮುಖಂಡರು ಆಗಮಿಸಿರಲಿಲ್ಲ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದಾಗ ಶೋಭಾ ಕರಂದ್ಲಾಜೆ ಸಲ್ಲಿಸುವುದನ್ನು ಪ್ರಾರಂಭಿಸಿ ಅಂದಿನಿಂದ ಇಲ್ಲಿಯ ತನಕ ಇದನ್ನು ಮುಂದುವರೆಸಿದ್ದಾರೆ. ಶೋಭಾ ಕರಂದ್ಲಾಜೆ ಅವರನ್ನು ದೇವಾಲಯದ ಅರ್ಚಕರು ಸ್ವಾಗತಿಸಿದರು.

# ಆಕ್ರೋಶ:
ಸರ್ಕಾರದ ನೀತಿಗಳು ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರಿಗೆ ಇನ್ನೊಂದು ಇದೆಯೇ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ನಗರದಿಂದ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಪ್ರವೇಶಿಸುವ ಭಾಗದಲ್ಲಿ ಬೀಗ ಕೂಡಾ ಹಾಕಲಾಗಿದೆ.

ಆದರೆ ಬೆಳಗ್ಗೆ ಬೀಗ ತೆಗೆದು ಶೋಭಾ ಕರಂದ್ಲಾಜೆಗೆ ಬೆಟ್ಟ ಹತ್ತಲು ಅವಕಾಶ ಮಾಡಿಕೊಟ್ಟಿದ್ದು ಇದನ್ನು ಜನರು ಪ್ರಶ್ನಿಸುತ್ತಿದ್ದಾರೆ. ನೀತಿ ನಿಯಮಗಳು ಜನಪ್ರತಿನಿಧಿಗಳಿಗೆ ಪ್ರತ್ಯೇಕವಾಗಿಯೇ ಎಂಬುದನ್ನು ಸರ್ಕಾರ ತಿಳಿಸಲಿ ಎಂದು ಒತ್ತಾಯಿಸಿದ್ದಾರೆ.

Facebook Comments

Sri Raghav

Admin