ಚಿತ್ರೀಕರಣದ ವೇಳೆ ತಮಿಳು ಚಿತ್ರನಟ ಅಜಿತ್‍ಗೆ ಅಪಘಾತ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.19- ತಮಿಳು ಚಿತ್ರರಂಗದ ತಲ್ಲ ಖ್ಯಾತಿಯ ನಟ ಅಜಿತ್‍ಗೆ ಚಿತ್ರವೊಂದರ ರೇಸ್ ದೃಶ್ಯ ಚಿತ್ರೀಕರಿಸುವ ವೇಳೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ನಿರ್ದೇಶಕ ಎಚ್.ವಿನೋತ್ ನಿರ್ದೇಶನದ ವಾಲಿಮೈ ಚಿತ್ರದಲ್ಲಿ ಪಾಲ್ಗೊಂಡಿದ್ದ ಅಜಿತ್ ಚಿತ್ರದ ರೇಸ್ ದೃಶ್ಯವನ್ನು ಚಿತ್ರೀಕರಿಸುವಾಗ ಅವರು ಓಡಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಅವರಿಗೆ ಗಾಯವಾಗಿದೆ.

ಸ್ವಲ್ಪ ಕಾಲ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ ನಂತರ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡು ಶೂಟಿಂಗ್ ಪ್ಯಾಕಪ್ ಆದ ನಂತರ ಫ್ಯಾಮಿಲಿ ಡಾಕ್ಟರ್ ಬಳಿ ಪರೀಕ್ಷೆಗೊಳಪಟ್ಟಿದ್ದು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ.

ಎಚ್.ವಿನೋದ್ ಹಾಗೂ ಅಜಿತ್‍ರ ಕಾಂಬಿನೇಷನ್‍ನಲ್ಲಿ ಮೂಡಿಬಂದಿದ್ದ ನೇರ್ಕೊಂಡ ಪಾರವೈ ಚಿತ್ರ ಯಶಸ್ವಿಯಾದ ನಂತರ ಆ ಜೋಡಿಯು ಮತ್ತೆ ಈ ಚಿತ್ರದಲ್ಲಿ ಒಗ್ಗೂಡಿದ್ದಾರೆ.
ಅಜಿತ್ ಅವರು ಬಲು ಬೇಗ ಚೇತರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ.

Facebook Comments

Sri Raghav

Admin