ಶೋಕಿವಾಲ ತುಂಟಾಟಗಳನ್ನು ಮೆಚ್ಚಿದ ಪ್ರೇಕ್ಷಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.30- ಮಂಡ್ಯದ ಹಳ್ಳಿ. ಆ ಹಳ್ಳಿಯ ನಾಲ್ಕು ಯುವಕರನ್ನು ಹಿಂದಿಟ್ಕೊಂಡು ಯಾವಾಗಲೂ, ಯಾವುದೇ ಕೇಮೆ ಇಲ್ಲದೆ ತಿರುಗಾಡಿಕೊಂಡು ಏನಾದರೂ ಒಂದು ತರ್ಲೆ ಮಾಡೊ ನಾಯಕ. ಅದರಲ್ಲೂ ಊರಿನ ಆಂಟಿಗಳನ್ನೂ ಬಿಡದೆ ಹೆಣ್ಮಕ್ಕಳಿಗೆ ಲೈನ್ ಹೊಡ್ಕೊಂಡು ಇರೊ ಅಪ್ಪ ಪೋಲಿ ಈ ಶೋಕಿವಾಲಾ.

ಪಕ್ಕದೂರಿನ ವರನ್ನು ಬಿಡದೆ ,ಸಿಕ್ಕ ಸಿಕ್ಕ ಹೆಣ್ಣುಮಕ್ಕಳಿಂದೆ ಸುತ್ತೋ ಟೈಮಲ್ಲಿ ಊರಿನ ಯಜಮಾನನ ಮಗಳು ಕಣ್ಣಿಗೆ ಬೀಳುತ್ತಾಳೆ. ಬೇರೆ ಲಲನೆಯರ ಮೇಲೆ ಇದ್ದ ಕಾನ್ಸಂಟ್ರೇಶನ್ ಎಲ್ಲವೂ ಈಕೆ ಮೇಲೆ ಟ್ರಾನ್ರ್ಸ ಆಗುತ್ತೆ. ಅಮೇಲೆ ಏನಾಗುತ್ತೆ ಅಂತ ನೀವು ಚಿತ್ರಮಂದಿರಕ್ಕೆ ಹೋಗಿ ನೋಡಿ.

ಶೋಕಿವಾಲ ಚಿತ್ರ ಪಕ್ಕಾ ಲವ್ ಸ್ಟೋರಿಯಾದರೂ, ಕಾಮಿಡಿ ಹಳಿಗೆ ಅನೇಕ ಕುತೂಹಲದ ತಿರುವುಗಳನ್ನು ಕೊಟ್ಟು, ಪ್ರೇಕ್ಷಕ ಮೊದಲಿನಿಂದಲೂ ಕೊನೆಯ ತನಕ ಎಲ್ಲಿಯೂ ತನ್ನ ಕಾನ್ಸಂಟ್ರೇಶನ್ ಡೈವರ್ಟ್ ಆಗದ ಹಾಗೆ ನಿರ್ದೇಶಕ ಜಾಕಿ ಎಚ್ಚರವಹಿಸಿ ಸ್ಕ್ರೀನ್ ಪ್ಲೇ ಬರೆದಿದ್ದಾರೆ. ಮೊದಲ ಚಿತ್ರವಾದರೂ ಆಡಿಯನ್ಸ್ ಪಲ್ಸï ಅನ್ನು ಅರ್ಥಮಾಡಿಕೊಂಡು, ಒಂದು ಫುಲ್ ಕಾಮಿಡಿ ಪ್ಯಾಕೇಜ್ ಕಥೆಯನ್ನು ಚಿತ್ರಮಂದಿರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ದೇಶಕನ ಕಲ್ಪನೆಗೆ ನಟ ಅಜಯ್ ರಾವ್ ನೂರಕ್ಕೆ ನೂರರಷ್ಟು ಸ್ಪಂದಿಸಿ ಅಭಿನಯಿಸಿದ್ದಾರೆ. ಇವರ ಬೇರೆ ಸಿನಿಮಗಳ ಪಾತ್ರಗಳಿಗೆ ಹೋಲಿಸಿಕೊಂಡರೆ ಶೋಕಿವಾಲ ಚಿತ್ರದಲ್ಲಿ ಸಂಪೂರ್ಣ ಬದಲಾದ ಅವತಾರವನ್ನೇ ತೋರಿಸಿದ್ದಾರೆ. ನಾಯಕಿ ಸಂಜನಾ ಮೊದಮೊದಲು ನಾಯಕನಿಗೆ ಮಾತಲ್ಲಿ ಗುನ್ನಾ ಕೊಡುತ್ತಾ ಗಯ್ಯಾಳಿ ಯಾಗಿ ಕಾಣಿಸಿಕೊಂಡರು ನಂತರದ ದೃಶ್ಯಗಳಲ್ಲಿ ಶೋಕಿವಾಲ ಶೋಕಿ ಆಟಗಳಿಗೆ ನೀರಾಗಿ ಕರಗಿ ಹೋಗುತ್ತಾಳೆ. ಈಕೆಯ ಅಭಿನಯಕ್ಕೂ ಫುಲ್ ಮಾಕ್ಸರ್ï ಕೊಡಬಹುದು.

ಇನ್ನು ಊರ ಗೌಡನ ಪಾತ್ರದಲ್ಲಿ ಶರತ್ ಲೋಹಿತಾಶ್ವ ಮತ್ತು ನಾಯಕನ ಅಕ್ಕನ ಗಂಡನ ಪಾತ್ರದಲ್ಲಿ ತಬಲಾ ನಾಣಿ ಎಲ್ಲರ ಗಮನ ಸೆಳೆಯುತ್ತಾರೆ. ಕುಡುಕನಾಗಿ ಬೇಜಾನ್ ಕೀಟಲೆ ಮಾಡಿದ್ದಾರೆ ಹಾಗೆ ನಟ ಗಿರಿ ಕಾಮಿಡಿ ದೃಶ್ಯಗಳಲ್ಲಿ ಹೆಚ್ಚಿನ ಪಾಲನ್ನು ಪಡೆದಿದ್ದಾರೆ.

ಕಥೆಯಲ್ಲಿ ಬರುವ ಮೆಲೋಡಿ ಹಾಡು, ಮತ್ತು ಹೆಸರಾಂತ ನಿರ್ದೇಶಕರು ಹೆಜ್ಜೆ ಹಾಕಿರುವ ಎಣ್ಣೆ ಹಾಡು ಸಂಗೀತಪ್ರಿಯರಿಗೆ ಮುದಕೊಡುತ್ತವೆ. ಶೋಕಿವಾಲ ಹಳ್ಳಿಯಲ್ಲಿ ಚಿತ್ರೀಕರಣವಾದರೂ, ಕಥೆಗೆ ಮತ್ತು ದೃಶ್ಯಗಳಿಗೆ ಬೇಕಾದ ಶ್ರೀಮಂತಿಕೆಯನ್ನು ಎಲ್ಲಿಯೂ ಕಡಿಮೆ ಆಗದಹಾಗೆ ನಿರ್ಮಾಪಕ ಚಂದ್ರಶೇಖರ್ ಮತ್ತು ನಿರ್ದೇಶಕ ಜಾಕಿ ನೋಡಿಕೊಂಡಿದ್ದಾರೆ.

ಮನರಂಜನೆಗಾಗಿ ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕನಿಗೆ ಹೆಚ್ಚು ಕಾಮಿಡಿ, ಸಸ್ಪೆನ್ಸ್ ,ಆಕ್ಷನ್, ರೋಮ್ಯಾನ್ಸ್ ಎಲ್ಲವೂ ಇದೆ. ಲಾಜಿಕ್ ಹುಡುಕದೆ ಮೊದಲಿನಿಂದಲೂ ಕೊನೆಯ ತನಕ ಯಾವುದೇ ಅಡ್ಡಿ ಇಲ್ಲದೆ ಶೋಕಿವಾಲ ನನ್ನ ಕಣ್ತುಂಬಿಕೊಳ್ಳಬಹುದು.

Facebook Comments