ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 3ನೇ ಚಿನ್ನ, ಶೂಟಿಂಗ್‍ನಲ್ಲಿ ಮನೀಷ್ ನರ್ವಾಲ್ ಸಾಧನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ,ಸೆ.4-ಜಪಾನ್‍ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಶೂಟರ್ ಮನೀಷ್ ನರ್ವಾಲ್ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.ಇದರೊಂದಿಗೆ ಪ್ಯಾರಾಲಂಪಿಕ್ಸ್‍ನಲ್ಲಿ ಭಾರತೀಯ ಕ್ರೀಡಾಪಟುಗಳು ಇದುವರೆಗೂ ಮೂರು ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಇದರ ಜತೆಗೆ ಸಿಂಘರಾಜ್ ಅದಾನಾ ಅವರು ಬೆಳ್ಳಿ ಪದಕ ಪಡೆದು ಭಾರತದ ಸಾಧನೆಗೆ ಮತ್ತೊಂದು ಮುನ್ನುಡಿ ಬರೆದಿದ್ದಾರೆ.19 ವರ್ಷದ ನರ್ವಾಲ್ ಅವರು, ಒಟ್ಟು 218.2 ರೆಂಜಿನಲ್ಲಿ ಶೂಟ್ ಮಾಡುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.

39 ವರ್ಷದ ಅದಾನಾ ಅವರು, ಪಿಒನ್ ಪುರುಷರ 10 ಮೀಟರ್ ಏರ್ ಪಿಸ್ತೂಲ್‍ನ ಎಸ್‍ಎಚ್1 ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಇದರೊಂದಿಗೆ ಒಂದೆ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಪಡೆದವರ ಪಟ್ಟಿಯಲ್ಲಿ ಅದಾನಾ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಸ್ತುತ ಪಂದ್ಯದಲ್ಲಿ ಶೂಟರ್ ಅವಾನಿ ಲೇಖಾರ ಅವರು ಚಿನ್ನ ಮತ್ತು ಕಂಚು ಪದಕ ಗೆದ್ದಿದ್ದರೆ, ಜೋಗಿಂದರ್ ಸಿಂಗ್ ಸೋ ಅವರು 1984 ರ ಒಲಂಪಿಕ್ಸ್‍ನಲ್ಲಿ ಬೆಳ್ಳಿ ಹಾಗೂ ಕಂಚು ಪದಕ ಗೆದ್ದು ಬೀಗಿದ್ದರು. ಅದೇ ರೀತಿ ಇನ್ನಿತರ ಇಬ್ಬರು ಭಾರತೀಯ ಆಟಗಾರರು ಒಂದೇ ಟೂರ್ನಿಯಲ್ಲಿ ಎರಡು ಪದಕ ಪಡೆದ ಸಾಧನೆ ಮಾಡಿದ್ದರು.

Facebook Comments

Sri Raghav

Admin