ಧಾರಾವಾಹಿ-ರಿಯಾಲಿಟಿ ಶೋ ಚಿತ್ರೀಕರಣ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಕರ್ನಾಟಕದಲ್ಲಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ಮಾ.22 ರಿಂದ ಮಾ.31ರವರೆಗೆ ಸ್ಥಗಿತಗೊಳಿಸಲಾಗುತ್ತಿವೆ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದರು.

ಪ್ರಪಂಚವನ್ನೇ ಆತಂಕಕ್ಕೆ ದೂಡಿರುವ ಸೋಂಕಾಗಿ, ಬ್ರಹ್ಮ ರಾಕ್ಷಸನಂತೆ ತಾಂಡವವಾಡುತ್ತಿರುವ ಕೊರೊನಾ- ಕೊವಿಡ್-19ರ ವಿಷಯ ಇದೀಗ ಎಲ್ಲೆಡೆ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಸೋಂಕು ಹರಡದಂತೆ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಶ್ಲಾಘನೀಯ.

ಅವರ ಈ ಕೈಂಕರ್ಯಕ್ಕೆ ನಮ್ಮ ಸಂಘ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತನ್ನ ನೈತಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಸರ್ಕಾರದ ಪ್ರಯತ್ನಕ್ಕ ಕೈಜೋಡಿಸುತ್ತಾ ಎಲ್ಲಾ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಮಾ.22 ರಿಂದ 31ರವರೆಗೆ ಸಂಪೂರ್ಣವಾಗಿ ನಿಲ್ಲಿಸಲು ಒಮ್ಮತದಿಂದ ತೀರ್ಮಾನಿಸಲಾಗಿದೆ.

ಮಾ. 31ರಂದು ಅಂದಿನ ಸ್ಥಿತಿಗತಿಗಳನ್ನು ಅವಲೋಕಿಸಿ ಚಿತ್ರೀಕರಣದ ಪುನರ್ ಆರಂಭದ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments