ವೈಟ್ ಹೌಸ ಹೊರಗೆ ಗುಂಡಿನ ಸದ್ದು, ಕೆಲಕಾಲ ಟ್ರಂಪ್ ಕಕ್ಕಾಬಿಕ್ಕಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.11-ಅಮೆರಿಕ ರಾಜಧಾನಿ ವಾಷಿಂಗ್ಟನ್‍ನಲ್ಲಿರುವ ರಾಷ್ಟ್ರಾಧ್ಯಕ್ಷರ ಅಕೃತ ನಿವಾಸ ಶ್ವೇತಭವನದ ಹೊರಗೆ ಗುಂಡು ಹಾರಿಸಿದ ವ್ಯಕ್ತಿಯ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ. ಈ ಪ್ರಸಂಗದಿಂದ ವೈಟ್‍ಹೌಸ್‍ನಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಂಡಿನ ಸದ್ದು ಕೇಳಿ ಹೊರಗೆ ದೌಡಾಯಿಸಿದರು. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಶ್ವೇತಭವನದ ಉತ್ತರ ಭಾಗದಲ್ಲಿ ಗುಂಡು ಹಾರಿಸಿದ.

ತಕ್ಷಣ ಕಾರ್ಯಪ್ರವೃತ್ತರಾದ ರಹಸ್ಯ ಸೇವಾ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿದರು. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.

ಶ್ವೇತಭವನದ ಹೊರಗೆ ಗುಂಡಿನ ಶಬ್ದಗಳು ಕೇಳುತ್ತಿದ್ದಂತೆ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿ ಹೊರಗೆ ದೌಡಾಯಿಸಿದರು.

ನಂತರ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಪಡೆದು ಹಿಂದಿರುಗಿ ಸುದ್ದಗೋಷ್ಠಿ ಮುಂದುವರಿಸಿದರು. ವೈಟ್‍ಹೌಸ್ ಹೊರಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ.

ಆತನನ್ನು ನಮ್ಮ ಭದ್ರತಾಪಡೆ ಗಾಯಗೊಳಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆತ ಯಾರ. ಯಾವ ಉದ್ದೇಶಕ್ಕಾಗಿ ಶ್ವೇತಭವನದ ಬಳಿ ಬಂದ ಇತ್ಯಾದಿ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಮಾದ್ಯಮ ಪ್ರತಿನಿಗಳಿಗೆ ಟ್ರಂಪ್ ಮಾಹಿತಿ ನೀಡಿದರು.

Facebook Comments

Sri Raghav

Admin