ಮಗನ ಎದುರೇ ತಂದೆಯನ್ನು ಗುಂಡಿಟ್ಟು ಕೊಂದರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ. 25- ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರು ವರ್ಷದ ಮಗನ ಮುಂದೆಯೇ ತಂದೆಯನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿರುವ ದಾರುಣ ಘಟನೆ ದೇಶದ ರಾಜಧಾನಿಯ ಓಖ್ಲಾ ಸಬ್ಜಿ ಮಂಡಿ ಬಳಿ ಸಂಭವಿಸಿದೆ.

ತರಕಾರಿ ವ್ಯಾಪಾರಿ ಮೊಹಮ್ಮದ್ ಪಝ್ಲೂ ಅಪರಿಚಿತರ ಗುಂಡಿಗೆ ಬಲಿಯಾಗಿದ್ದು ಆತನ ಮಗನಿಗೂ ಗಂಭೀರವಾಗಿ ಗಾಯವಾಗಿದ್ದು ಆತನಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೃತ ಮೊಹಮ್ಮದ್ ಪಝ್ಲೂ ಸಬ್ಜಿ ಮಂಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು ನಿನ್ನೆ ತನ್ನ ಸ್ನೇಹಿತ ಹಾಗೂ ಮಗನೊಂದಿಗೆ ತನ್ನ ತಂಗಿ ಮನೆಗೆ ಹೋಗಿ ಸ್ನೇಹಿತನನ್ನು ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದು ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ.

ಮೊಹಮ್ಮದ್‍ರ ಬೈಕ್ ಅನ್ನು ಹಿಂಬಳಿಸಿದ ವ್ಯಕ್ತಿಗಳು ಯಾರು? ಅವರು ಏತಕ್ಕೆ ಈ ಕೊಲೆ ಮಾಡಿದರು? ಕೃತ್ಯಕ್ಕೆ ಹಳೇ ದ್ವೇಷವೇ ಕಾರಣವಾಗಿದೆಯೇ ಎಂಬ ನಾನಾ ಕೋನಗಳಿಂದ ತನಿಖೆ ಆರಂಭಿಸಿರುವ ಪೊಲೀಸರು ಅಲ್ಲೇ ಇರುವ ಸಿಸಿಟಿವಿಯನ್ನು ಪರೀಕ್ಷಿಸಿದ ನಂತರ ಗೋಚರಿಸಿದ್ದು ಶೀಘ್ರ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments