ಇಂದು ಕರ್ನಾಟಕದಿಂದ ಬಿಹಾರಕ್ಕೆ ತೆರಳಲಿವೆ 4 ವಿಶೇಷ ಶ್ರಮಿಕ್ ರೈಲುಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳುವ ಪ್ರಕ್ರಿಯೆ ಮುಂದುವರೆದಿದ್ದು , ಇಂದು ಬೆಂಗಳೂರಿನಿಂದ ಬಿಹಾರಕ್ಕೆ 4 ವಿಶೇಷ ಶ್ರಮಿಕ್ ರೈಲುಗಳು ತೆರಳಲಿವೆ.

ಸುಮಾರು 5,000ಕ್ಕೂ ಹೆಚ್ಚು ಮಂದಿ ಬಿಹಾರದ ವಿವಿಧ ರಾಜ್ಯಗಳಿಗೆ ತೆರಳುತ್ತಿದ್ದು , ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಊಟದ ವ್ಯವಸ್ಥೆ ಹಾಗೂ ರೈಲ್ವೆ ಇಲಾಖೆಯಿಂದ ನೀರಿನ ಬಾಟಲ್ ಹಾಗೂ ಕೆಲ ಆಹಾರ ವಸ್ತುಗಳನ್ನು ನೀಡಲಾಗಿದೆ.

ಇಂದು ಚಿಕ್ಕ ಬಾಣಾವರದಿಂದ ಈ ವಿಶೇಷ ರೈಲುಗಳು ತೆರಳುತ್ತಿದ್ದು , ಮಧ್ಯಾಹ್ನ 2 ಗಂಟೆಗೆ ದರ್ಬಾಂಗ್‍ಗೆ , 4 ಗಂಟೆಗೆ ಮುಜಾಫರ ಬಾದ್, 6 ಗಂಟೆಗೆ ಅರರ್ಯಾ ಮತ್ತು ರಾತ್ರಿ 8 ಗಂಟೆಗೆ ಬಾಗಲ್‍ಪುರ್‍ಗೆ ತೆರಳಲಿದೆ.

Facebook Comments