ಲಾಕ್‍ಡೌನ್ ಜಾರಿಯಲ್ಲಿದ್ದರೂ ವಿಮಾನ ಹಾಗೂ ಶ್ರಮಿಕ್ ರೈಲು ಸಂಚಾರದಲ್ಲಿ ವ್ಯತ್ಯಯ ವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.15- ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ವಿಮಾನ ಹಾಗೂ ರೈಲು ಸಂಚಾರದ ವ್ಯತ್ಯಯ ಕಾಣಸಲಿಲ್ಲ. ಪ್ರಯಾಣಿಕರ ದಂಡೇ ನೆರೆದಿತ್ತು.

ಸಂಗೋಳ್ಳಿ ರಾಯಣ ರೈಲು ನಿಲ್ದಾಣದಲ್ಲಿ ಉತ್ತರಭಾರತದ ಕಾರ್ಮಿಕರು ತಮ್ಮ ಸ್ವಂತೂರಿಗೆ ತೆರಳಲು ರೈಲು ನಿಲ್ದಾಣಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ರೈಲ್ವೆ ಇಲಾಖೆ ಅವರಿಗೆ ಶ್ರಮಿಕ್ ರೈಲುಗಳ ಮೂಲಕ ಅವರೂರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಜಮಾಯಿಸಿದ್ದರು.

ಇನ್ನೊಂದೆಡೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕೂಡ ದೇಶೀಯ ವಿಮಾನಗಳ ಹಾರಾಟ ಇದ್ದುದ್ದರಿಂದ ಪ್ರಯಾಣಿಕರು ಹೆಚ್ಚಾಗಿ ಸೇರಿದ್ದರು.

ಬಸ್ ಹಾಗೂ ಕ್ಯಾಬ್ ಸಂಚಾರ ಇಲ್ಲದಿದ್ದರೂ ಸಹ ಕೆಲವರು ತಮ್ಮ ಸ್ವಂತ ವಾಹನದಲ್ಲಿ ಇನ್ನು ಕೆಲವರು ಆಟೋದಲ್ಲಿ ಬಂದಿದ್ದರು. ಮುಂಬೈ, ದೆಹಲಿ, ಕೋಲ್ಕತ್ತಾ, ಅಹಮದಾಬಾದ್, ಕೊಚ್ಚಿ ಸೇರಿದಂತೆ ಹಲವು ಕಡೆ ವಿಮಾನಗಳ ಸಂಚಾರ ಇತ್ತು.

ಲಾಕ್‍ಡೌನ್‍ನಿಂದಾಗಿ ವಿಮಾನಸೇವೆಯೂ ಕೂಡ ಸಾಧ್ಯತೆ ಇತ್ತು. ಆದರೆ ರಾಜ್ಯ ಸರ್ಕಾರ ಮೊದಲೇ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಸೇವೆ ಒದಗಿಸಲು ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಟಿಕೆಟ್ ಬುಕ್ ಮಾಡಿದ್ದ ಎಲ್ಲರಿಗೂ ಮೆಸೇಜ್ ಕಳುಹಿಸಿ ಅವರಿಗೆ ನಿಗದಿತ ಸಮಯಕ್ಕೆ ವಿಮಾನ ಹಾರಾಟದ ಬಗ್ಗೆ ತಿಳಿಸಿದ್ದರು.

ಈ ನಡುವೆಯೇ ಒತ್ತಡದಲ್ಲಿಯೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ದೃಶ್ಯಗಳು ಕಂಡುಬಂತು.

Facebook Comments

Sri Raghav

Admin