ಅಮೆರಿಕ ಸಂಸತ್‍ನಲ್ಲಿ ಭಾರತದ ಜೈನ ಕವಿ ರಾಜಚಂದ್ರಾಜಿ ಗುಣಗಾನ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಅ.21- ಅಮೆರಿಕ ಸಂಸತ್ತಿನಲ್ಲಿ ಭಾರತದ ಜೈನ ಕವಿ, ಧಾರ್ಮಿಕ ಮುಖಂಡ ಹಾಗೂ ತತ್ವಜ್ಞಾನಿ ರಾಜಚಂದ್ರಾಜಿ ಅವರ ಗುಣಗಾನ ಮಾಡಲಾಗಿದೆ. ರಾಜಚಂದ್ರಾಜಿ ವಿರಚಿತ ಆತ್ಮಸಿದ್ದಿ ಗ್ರಂಥದಲ್ಲಿರುವ ಹಲವಾರು ಪದ್ಯದ ಸಾಲುಗಳನ್ನು ಉಲ್ಲೇಖಿಸಿ ಭಾರತೀಯ ಮೂಲದ ಸಂಸದ ರಾಜ ಕೃಷ್ಣಮೂರ್ತಿ ಅವರು ಮಹಾಕವಿಗೆ ನಮನ ಸಲ್ಲಿಸಿದ್ದಾರೆ.

1867ರಲ್ಲಿ ಗುಜರಾತಿನ ವಾವಾನಿಯ ಗ್ರಾಮದಲ್ಲಿ ಜನಿಸಿದ ರಾಜಚಂದ್ರಾಜಿ ಅವರು ಸಣ್ಣ ವಯಸ್ಸಿನಲ್ಲೆ ಆಧ್ಯಾತ್ಮಿಕ ಮಾರ್ಗ ಅನುಸರಿಸಿ ಜೈನ ಧರ್ಮದ ಅನುಯಾಯಿಯಾಗಿ ಹಲವಾರು ಗ್ರಂಥಗಳ ಮೂಲಕ ಅಹಿಂಸಾ ತತ್ವವನ್ನು ಬೋಸಿದ ಮಹಾಕವಿಯಾಗಿ ಮನೆ ಮಾತಾಗಿದ್ದರು.

ಕೇವಲ 34 ವರ್ಷ ಬದುಕಿದ್ದ ಮಹಾನ್ ವ್ಯಕ್ತಿ ರಾಜಚಂದ್ರಾಜಿ ಅವರು ತಮ್ಮ ಜೀವಿತಾವಯಲ್ಲಿ ಇಡೀ ವಿಶ್ವಕ್ಕೆ ಶಾಂತಿ ಬೋಸಿದ ಮಹಾತ್ಮರಾಗಿದ್ದರು ಎಂದು ಕೃಷ್ಣಮೂರ್ತಿ ಉಲ್ಲೇಖಿಸಿದ್ದಾರೆ.

1891 ರಲ್ಲಿ ರಾಜಚಂದ್ರಾಜಿ ಅವರು ಒಬ್ಬ ಯುವ ವಕೀಲರನ್ನು ದೇಶಕ್ಕೆ ಪರಿಚಯಿಸಿದರು ಅವರೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

Facebook Comments