“ನಾನು ಅಪಹರಣಕ್ಕೊಳಗಾಗಿಲ್ಲ” : ಸ್ಪೀಕರ್’ಗೆ ಪತ್ರ ಬರೆದ ಶಾಸಕ ಶ್ರೀಮಂತ್ ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.19-ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರು ತಾವು ಅಪಹರಣಕ್ಕೆ ಒಳಗಾಗಿಲ್ಲ. ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪತ್ರ ಬರೆದಿದ್ದಾರೆ ಎಂದು ಪತ್ರ ಬರೆದಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನೆ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಶ್ರೀಮಂತ್ ಪಾಟೀಲ್ ಬರೆದಿರುವ ಪತ್ರವನ್ನು ಸಭಾಧ್ಯಕ್ಷರು ವಾಚಿಸಿದರು.

ಬೆಂಗಳೂರಿನ ರೆಸಾರ್ಟ್‍ನಿಂದ ತುರ್ತು ಕಾರ್ಯದ ನಿಮಿತ್ತ ಜು.17ರಂದು ಚೆನ್ನೈಗೆ ತೆರಳಿದ್ದು, ಆಗ ಎದೆನೋವು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಮುಂಬೈ ಆಸ್ಪತ್ರೆಗೆ ದಾಖಲಾಗಿರುವುದಾಗಿ ಉಲ್ಲೇಖಿಸಿದ್ದಾರೆ.

ಇದು ಪೂರ್ವ ನಿಯೋಜಿತವಾಗಿದ್ದರೆ ಲೆಟರ್‍ಹೆಡ್‍ನಲ್ಲಿ ಪತ್ರ ಬರೆಯುತ್ತಿದ್ದೆ. ಹಠಾತ್ ಘಟನೆಯಾದರಿಂದ ವಿನಂತಿಸುತ್ತಿದ್ದೇನೆ. 15ನೇ ವಿಧಾನಸಭೆಯ 4ನೇ ಅಧಿವೇಶನದ ಇನ್ನುಳಿದ ಕಾರ್ಯಕಲಾಪಗಳಿಗೆ ಗೈರಾಗಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಇದರ ಬಗ್ಗೆ ತಾವು ತೀರ್ಮಾನ ಕೈಗೊಳ್ಳುವುದಾಗಿ ಸಭಾಧ್ಯಕ್ಷರು ಹೇಳಿರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin