ಅಥಣಿಯಲ್ಲಿ ಶ್ರೀಮಂತ ಪಾಟೀಲ್‍ಗೆ ಭರ್ಜರಿ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

ಅಥಣಿ,ಡಿ.9-ಅನರ್ಹತೆ ಪಟ್ಟ ಕಟ್ಟಿಕೊಂಡು ಅನೇಕ ದಿನಗಳವರೆಗೆ ಅದ್ಭುತವಾಗಿ ಅಥಣಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ ಶ್ರೀಮಂತ ಪಾಟೀಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಅವರು ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಇವರನ್ನು ಎಡಬಲದಲ್ಲಿ ಹೆಗಲಮೇಲೆ ಕೂರಿಸಿಕೊಂಡು ವಿಧಾನಸಭೆಯನ್ನು ಪ್ರವೇಶಿಸುತ್ತೇನೆ ಎಂದು ಮುಂಚೆ ಘೋಷಿಸಿದ್ದು ಇಂದು ಶ್ರೀಮಂತ ಪಾಟೀಲ್ ವಿಷಯದಲ್ಲಿ ನಿಜವಾಗಿದೆ.

ಹೀಗಾಗಿ ಬೆಳಗಾವಿ ಜಿಲ್ಲೆಗೆ ಶ್ರೀಮಂತ ಪಾಟೀಲ ಮೂಲಕ ಇನ್ನೊಂದು ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಶ್ರೀಮಂತ ಪಾಟೀಲ್ ಪ್ರತಿ ಸುತ್ತಿನಲ್ಲೂ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಂಡು ಕೊನೆಗೆ ವಿಜಯ ಸಾಧಿಸಿದ್ದಾರೆ.

ಪತ್ರಕರ್ತರೊಂದಿಗೆ ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಂತ ಪಾಟೀಲ್ ಪತ್ರಕರ್ತರು ನೀವು ಯಾವ ಖಾತೆ ಬೆಡುತ್ತೀರಿ ಪ್ರಶ್ನಿಸಿದಾಗ ನಮಗೆ ಆಸಕ್ತಿ ಇಲ್ಲದ ಅನುಭವವಿಲ್ಲದ ಕ್ಷೇತ್ರ ತೆಗೆದುಕೊಂಡು ಪ್ರಯೋಜನವಿಲ್ಲ ನಮಗೆ ಕೃಷಿ ಹಾಗೂ ಸಣ್ಣ ನೀರಾವರಿ ಇಲಾಖೆ ಕ್ಷೇತ್ರದಲ್ಲಿ ಹೆಚ್ಚಿನ ಅನುಭವವಿದೆ ಹೀಗಾಗಿ ಈ ಖಾತೆ ತೆ ನೀಡಿದರೆ ಒಳ್ಳೆಯದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕು ಎಂದು ಹೇಳಿದರು.

ಅನರ್ಹತೆ ಪಟ್ಟ ಕಟ್ಟಿಕೊಂಡು ಕಾಂಗ್ರೆಸ್‍ನಿಂದ ಅನೇಕ ಆರೋಪಗಳನ್ನು ಎದುರಿಸಿ ಎಲ್ಲಕ್ಕೂ ಉತ್ತರವೆಂಬಂತೆ ಈಗ ಶ್ರೀಮಂತ ಪಾಟೀಲ್ ಎರಡನೇ ಬಾರಿ ಗೆಲುವು ಸಾಧಿಸುವ ಮೂಲಕ ತಮ್ಮ ಪ್ರತಿಷ್ಠೆ ಮೆರೆದಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹತ್ತು ಹಲವಾರು ಸಭೆಗಳನ್ನು ನೆರವೇರಿಸುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ ಪ್ರಚಾರವನ್ನು ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಅವರನ್ನು ಎರಡನೇ ಬಾರಿಗೆ ಸೋಲಿಸಿದ್ದಾರೆ.

Facebook Comments