ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಗೋವಾ, ಜ.18- ಅಂಕೋಲಾ ಬಳಿ ರಸ್ತೆಗೀಡಾಗಿ ಗಂಭೀರ ಗಾಯಗಳಿಂದ ಪಣಜಿಯ ಗೋವಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯ ದಿನೇ ದಿನೇ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ನಾಯಕ್ ಅವರು ವೈದ್ಯಕೀಯ ಚಿಕಿತ್ಸೆಗಳಿಗೆ ಸ್ಪಂದಿಸುತ್ತಿದ್ದು, ಅವರ ರಕ್ತದೊತ್ತಡ, ನಾಡಿ ಮತ್ತು ಆಮ್ಲಜನಕ ಮಟ್ಟಗಳು ಸಾಮಾನ್ಯ ಮಿತಿಯಲ್ಲಿವೆ. ಆದರೂ ಮೂಗಿನ ಮೂಲಕ ಆಮ್ಲಜನಕ ನೀಡಲಾಗುತ್ತಿದೆ ಎಂದು ಜಿಎಂಸಿಎಚ್ ಡೀನ್ ಡಾ. ಶಿವಾನಂದದ ಬಂಡೇಕರ್ ತಿಳಿಸಿದ್ದಾರೆ.

ಎಡ ಮೇಲಿನ ಮತ್ತು ಎಡ ಕೆಳಗಿನ ಅಂಗದ ಮಾಡಿದ್ದ ಡ್ರೆಸ್ಸಿಂಗ್ ಅನ್ನು ಬದಲಾಯಿಸಲಾಗಿದೆ ಹಾಗೂ ಇತರ ಗಾಯಗಳೆಲ್ಲಾ ವಾಸಿಯಾಗುತ್ತಿವೆ. ಅವರ ಅಂಗಗಳ ಚಲನೆಯಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಡೀನ್ ಮಾಹಿತಿ ನೀಡಿದ್ದಾರೆ.

Facebook Comments