#MeToo ದೂರು ಕೊಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ, ವಿಷಾದವಿಲ್ಲ : ಶೃತಿ ಹರಿಹರನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.3- ಚಿತ್ರರಂಗದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆ (ಮೀ ಟೂ) ಎಂಬ ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆಯೇ ಹೊರತು ವಿಷಾದವಿಲ್ಲ ಎಂದು ನಟಿ ಶೃತಿ ಹರಿಹರನ್ ಹೇಳಿದ್ದಾರೆ.

ನಗರದ ಅಶೋಕ್ ಲಲಿತ್ ಹೋಟೆಲ್‌ನಲ್ಲಿ ಫೇಸ್‌ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ನಡೆದ ವಿ ದಿ ವುಮೆನ್(ನಾವು ಮಹಿಳೆಯರು)ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀ ಟೂ ಅಭಿಯಾನದಲ್ಲಿ ದೂರು ಕೊಟ್ಟಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾಗಿರುವುದು ನಿಜ. ಅದಕ್ಕಾಗಿ ವಿಷಾದ ಪಡುವುದಿಲ್ಲ ಎಂದರು.

ನನ್ನ ಬಳಿ ಈಗಲೂ ಒಂದೇ ಒಂದು ಸಿನಿಮಾ ಇಲ್ಲ, ಆದರೆ ಅದರ ಬಗ್ಗೆ ಚಿಂತೆ ಇಲ್ಲ, ನನ್ನ ಮೂರು ತಿಂಗಳ ಪುತ್ರಿ, ಗಂಡನ ಜತೆ ಖುಷಿಯಿಂದಿದ್ದೇನೆ, ಈ ಬಾರಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಬಂದ ಕಾರಣ ಮತ್ತೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದೇನೆ ಎಂದರು.

ದೂರು ನೀಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಶೃತಿ ಅವರನ್ನು ಕಾರ್ಯಕ್ರಮಕ್ಕೆ ಕರೆಯಲಾಗಿತ್ತು. ವಿಚಾರಣೆ ವೇಳೆ ವಕೀಲರು ನನಗೊಂದು ವಿಷಯ ಹೇಳಿದ್ದರು. ಮುಟ್ಡಿದ್ದರೆ ಹೇಳಿ, ಕೇವಲ ಮಾತನಾಡಿದ್ದರೆ ಹೇಳಬೇಡಿ ಎಂದಿದ್ದರು.

ಇದು ಭಾರತೀಯ ಕಾನೂನು ವ್ಯವಸ್ಥೆ. ನಿಜಕ್ಕೂ ಮೀಟೂ ನಂತಹ ಪ್ರಕರಣಗಳಲ್ಲಿ ಸಾಕ್ಷಿ ಇರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.

Facebook Comments

Sri Raghav

Admin