ಸಚಿನ್ 13 ವರ್ಷದ ದಾಖಲೆ ಸರಿಗಟ್ಟಿದ ಗಿಲ್

ಈ ಸುದ್ದಿಯನ್ನು ಶೇರ್ ಮಾಡಿ

ಪುಣೆ, ಮೇ 11- ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಪ್ಲೇಆಫ್ಗೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಶುಭಮನ್ಗಿಲ್ ತನ್ನ ಬಾಲ್ಯದ ರೋಲ್ಮಾಡೆಲ್ ಸಚಿನ್ ತೆಂಡೂಲ್ಕರ್ರ 13 ವರ್ಷಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. 2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಆ ದಾಖಲೆಯನ್ನು ನಿರ್ಮಿಸಿದ್ದರು.

* ಏಪ್ರಿಲ್ 18, 2009 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಸಚಿನ್ ತೆಂಡೂಲ್ಕರ್ ಪೂರ್ತಿ 20 ಓವರ್ಗಳನ್ನು ಆಡಿ ಒಂದೇ ಒಂದು ಸಿಕ್ಸರ್ ಕೂಡ ಗಳಿಸಿರಲಿಲ್ಲ, ನಿನ್ನೆಯ ಪಂದ್ಯದಲ್ಲೂ ಕೂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ನ ಆರಂಭಿಕ ಆಟಗಾರ ಗಿಲ್ ಒಂದೇ ಒಂದು ಸಿಕ್ಸರ್ ಸಿಡಿಸಿದರೆ ಅಜೇಯರಾಗಿ ಉಳಿದಿದ್ದಾರೆ.

* ಸಚಿನ್ ಎದುರಿಸಿದ 49 ಎಸೆತಗಳಲ್ಲಿ 59 ರನ್ ಗಳಿಸಿದ್ದರೆ, ಗಿಲ್ ಅಷ್ಟೇ ಎಸೆತಗಳನ್ನೆದುರಿಸಿ 63 ರನ್ಗಳನ್ನು ಸಿಡಿಸಿದ್ದಾರೆ.
* ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ನಡೆದ ಆ ಪಂದ್ಯದಲ್ಲಿ ಸಚಿನ್ 7 ಬೌಂಡರಿ ಗಳಿಸಿದ್ದರೆ, ಗಿಲ್ ಕೂಡ 7 ಬೌಂಡರಿಗಳನ್ನು ಬಾರಿಸಿದ್ದಾರೆ.

* ಅಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ 19 ರನ್ಗಳ ಗೆಲುವು ಸಾಸಿದ್ದರೆ, ನಿನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಕಿಂಗ್ಸ್ ವಿರುದ್ಧ ಜಯ ಗಳಿಸಿದೆ.
* ಆಗಿನ ಪಂದ್ಯದಲ್ಲಿ ಸಚಿನ್ ಪಂದ್ಯ ಪುರುಷೋತ್ತಮರಾಗಿದ್ದರೆ, ನಿನ್ನೆಯ ಪಂದ್ಯದಲ್ಲಿ ಗಿಲ್ ಪಂದ್ಯಪುರುಷೋತ್ತಮರಾ ಗಿದ್ದಾರೆ.

Facebook Comments

Sri Raghav

Admin