ಭ್ರಷ್ಟಾಚಾರ ಸಾಬೀತುಪಡಿಸಿದರೆ ರಾಜೀನಾಮೆ ನೀಡುವೆ ; ಶ್ವೇತಾ ದೇವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ ; ನಾ ತಪ್ಪು ಮಾಡಿಲ್ಲ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ; ಭ್ರಷ್ಟಾಚಾರ ಸಾಬೀತುಪಡಿಸಿದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶ್ವೇತಾ ದೇವರಾಜ್ ತಿಳಿಸಿದರು. ಜಿಲ್ಲಾ ಪಂಚಾಯಿತಿಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಬಾರಿ‌ ನಡೆದ ಕೋವಿಡ್-19 ಸಭೆಯನ್ನು ವಿಶೇಷ ಸಭೆಯೆಂದೆ ಕರೆಯಲಾಗಿದೆ.

ಈ ವೇಳೆ ಜಿಲ್ಲಾ ಪಂಚಾಯಿತಿ ಅನುದಾನದ ಹಂಚಿಕೆ ಕುರಿತು ಪ್ರಸ್ತಾಪ ಮಾಡಲಾಗಿದ್ದು ಇದರಲ್ಲಿ ಕಾನೂನುಬಾಹಿರವಾದ ವಿಚಾರವಿಲ್ಲ ಹಾಗೂ ಜೆಡಿಎಸ್ ಸದಸ್ಯರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಈ ವಿಚಾರವಾಗಿ ಕ್ಷಮೆ ಕೇಳಬೇಕೆಂದು ಹೇಳುತ್ತಿರುವುದು ಸರಿಯಲ್ಲ ನಾ ಯಾರ ಬಳಿಯೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾ ಯಾರ ಕೈಗೊಂಬೆಯಲ್ಲಾ…ಅಧ್ಯಕ್ಷ ಪದವಿಯನ್ನು ನಾ ಎಂದೂ ದುರುಪಯೋಗ ಪಡಿಸಿಕೊಂಡವಳಲ್ಲಾ…!! ಜೆಡಿಎಸ್ ನವರು ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪ ಮಾಡುತ್ತಿದ್ದು ಈ ವಿಚಾರವಾಗಿ ಯಾವುದೇ ತನಿಖೆಗೂ ಸಿದ್ಧ; ಲಿಫ್ಟ್ ಮಂಜೂರಾತಿ ಹಾಗೂ ಸಂಬಳ ನೀಡುವ ವಿಚಾರದಲ್ಲಿ ಯಾವುದೇ ಲೋಪವಾಗಿಲ್ಲ ; ತಪ್ಪು ನಡೆದಿದ್ದರೆ ಯಾವುದೇ ತನಿಖೆಗೆ ಸಿದ್ಧ ಎಂದ ಅವರು ಭ್ರಷ್ಟಾಚಾರ ಸಾಬೀತುಪಡಿಸಿದಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು .

ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಅಲಂಕರಿಸಿದ ದಿನದಿಂದಲೂ ಜೆಡಿಎಸ್ ಪಕ್ಷದ ಸದಸ್ಯರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಸಾಮಾನ್ಯ ಸಭೆ ಕರೆದು ಆರು ತಿಂಗಳಾಗಿದೆ ಎಂದು ಸುಳ್ಳು ಹೇಳುತ್ತಿದ್ದು ಜಿಲ್ಲಾ ಪಂಚಾಯತಿಯಲ್ಲಿ ಎಲ್ಲಾ ಕಾರ್ಯಚಟುವಟಿಕೆಯು ಕಾನೂನುಬದ್ಧವಾಗಿಯೇ ಜರುಗುತ್ತಿದೆ ಎಂದು ಹೇಳಿದರು.

ಕುಡಿಯುವ ನೀರು ಯೋಜನೆ ಸಂಬಂಧ ಜೆಡಿಎಸ್ ಸದಸ್ಯರಿಗೂ ಸಹ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಆದರೆ ಈ ವಿಚಾರದಲ್ಲು ಸಹ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ತೊಡಕುಂಟು ಮಾಡುತ್ತಿರುವ ಜೆಡಿಎಸ್ ಸದಸ್ಯರು ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಅವರ ನಾಯಕರು ನನ್ನ ವಿರುದ್ಧ ಅಸಭ್ಯವಾಗಿ ಮಾತನಾಡುತ್ತಾರೆ ಅವರ ಮಾತು ಅವರ ಘನತೆಯನ್ನು ತೋರಿಸುತ್ತದೆ ಎಂದು ಜರಿದರು.

ಸಭೆ ಕರೆದರೂ ಸಹ ಜೆಡಿಎಸ್ ಸದಸ್ಯರು ಗೈರಾಗಿದ್ದಾರೆ ನಂತರ ಮಾಧ್ಯಮಗಳ ಮೂಲಕ ಸಭೆ ಕರೆದಿಲ್ಲ ಕಾನೂನು ಉಲ್ಲಂಘನೆ- ಅನುದಾನ ದುರ್ಬಳಕೆ- ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಾರೆ ಇದರಿಂದ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಶ್ವೇತಾ ದೇವರಾಜ್ ಕಿಡಿಕಾರಿದರು.

Facebook Comments