ಭಯೋತ್ಪಾದನೆಗೆ ಆರ್ಥಿಕ ನೆರವು, 12 ಕಡೆ ಎಸ್‍ಐಎ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಮೇ 14- ಭಯೋತ್ಪಾದನೆಗೆ ಹಣಕಾಸು ಸೌಲಭ್ಯ ಒದಗಿಸಿದ ಪ್ರಕರಣಕ್ಕೆ ಸಂಬಂಸಿದಂತೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್‍ಐಎ) 12 ಕಡೆ ದಾಳಿ ನಡೆಸಿದೆ.

ಭದರ್ವಾದಲ್ಲಿರುವ ಪಾಕಿಸ್ತಾನದ ಎಪಿಎಚ್‍ಸಿ ಅಧ್ಯಕ್ಷರ ಸ್ಥಳೀಯ ಮನೆ ಮೇಲೂ ದಾಳಿ ನಡೆಸಲಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ತನಿಖೆಗಾಗಿ ಎಸ್‍ಐಎಗೆ ಪ್ರಕರಣ ವರ್ಗಾಯಿಸಲಾಗಿದೆ. ತನಿಖಾ ಸಂಸ್ಥೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಶುಕ್ರವಾರ ಜಮ್ಮು, ಕಥುವಾ, ದೋಡಾ ಮತ್ತು ಕಾಶ್ಮೀರದಲ್ಲಿ ದಾಳಿ ಮಾಡಿ ಶೋಧ ನಡೆಸಿದೆ.

ಭದರ್ವಾದ ಮಸೀದಿ ಮೊಹಲ್ಲಾ ಪ್ರದೇಶದ ಮನೆಯೊಂದರ ಮೇಲೂ ದಾಳಿ ನಡೆಸಲಾಗಿದೆ. ವರದಿಗಳ ಪ್ರಕಾರ, ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಯ ಮನೆ ಮತ್ತು ಅಂಗಡಿಯ ಮೇಲೆ ದಾಳಿ ನಡೆಸಲಾಯಿತು. ಮಸೀದಿ ಮೊಹಲ್ಲಾ ಪ್ರದೇಶದಲ್ಲಿರುವ ಜುಬೇರ್ ಖತೀಬ್ ಅವರ ಮನೆಯ ಮೇಲೆ ಎಸ್‍ಐಎ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಜುಬೈರ್ ಅವರ ತಂದೆ ಹುಸೇನ್ ಖತೀಬ್ ಅವರು 20 ವರ್ಷಗಳಿಂದ ಪಾಕಿಸ್ತಾನದಲ್ಲಿದ್ದಾರೆ ಎಂದು ವರದಿಯಾಗಿದೆ. ಖತೀಬ್ ನಿಷೇತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನೊಂದಿಗೆ ಸಂಬಂಧ ಹೊಂದಿದ್ದಾನೆ. ಆತನ ಅಂಗಡಿಯಿಂದ ವೈಫೈ ರೂಟರ್ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

Facebook Comments